ಜ್ಞಾನವಾಪಿ, ಮಥುರಾ ಮಸೀದಿ ವಿವಾದ ಬಗೆಹರಿಸಲು ಅಜ್ಮೀರ್ ದರ್ಗಾ ಮುಖ್ಯಸ್ಥರ ಮಹತ್ವದ ಸಲಹೆ

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಗಳಿಗೆ ಸಂಬಂಧಿಸಿದ ವಿವಾದಗಳನ್ನು ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ಅಜ್ಮೀರ್ ದರ್ಗಾ ಮುಖ್ಯಸ್ಥ ಸೈಯದ್ ಝೈನುಲ್ ಅಬೆದಿನ್ ಹೇಳಿದ್ದಾರೆ.

ಅಖಿಲ ಭಾರತ ಸೂಫಿ ಸಜ್ಜನ್ಶಿನ್ ಕೌನ್ಸಿಲ್ನ ರಾಜಸ್ಥಾನ ಘಟಕ ಆಯೋಜಿಸಿದ್ದ “ಪೈಗಮ್-ಎ-ಮೊಹಬ್ಬತ್ ಹಮ್ ಸಬ್ ಕಾ ಭಾರತ್” ಎಂಬ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅಬೆದಿನ್, ವಸುದೈವ ಕುಟುಂಬಕಂ ನಾಗರಿಕತೆಯನ್ನು ಅನುಸರಿಸುವ ಮೂಲಕ ಜಗತ್ತಿನಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವಲ್ಲಿ ಭಾರತ ಸಕಾರಾತ್ಮಕ ಪಾತ್ರ ವಹಿಸುತ್ತಿ̧ದೆ ಯಾವುದೇ ವಿವಾದವನ್ನು ಪರಸ್ಪರ ಒಪ್ಪಿಗೆಯಿಂದ ಪರಿಹರಿಸಬೇಕು ಎಂದು ಅವರು ಹೇಳಿದರು.

ವಿಶ್ವ ಶಾಂತಿಯಲ್ಲಿ ಭಾರತವು ತನ್ನ ಪಾತ್ರವನ್ನು ವಹಿಸುತ್ತಿದೆ, ಆದ್ದರಿಂದ ನಮ್ಮ ದೇಶದ ಆಂತರಿಕ ಸಮಸ್ಯೆಗಳನ್ನು ನ್ಯಾಯಾಲಯಗಳ ಹೊರಗೆ ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಗಳು ನಡೆಯಬೇಕು… ಇದಕ್ಕೆ ಬೇಕಾಗಿರುವುದು ಬಲವಾದ ಉಪಕ್ರಮ” ಎಂದು ಅವರು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಮುಸ್ಲಿಂ ಸಮುದಾಯವನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ.  ವಾಸ್ತವವೆಂದರೆ, ಕಾಯ್ದೆಯ ನಿಬಂಧನೆಗಳ ವಿವರವಾದ ವಿಶ್ಲೇಷಣೆಯ ನಂತರ, ಕಾನೂನಿಗೆ ಭಾರತೀಯ ಮುಸ್ಲಿಮರೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಕಾನೂನು ಅವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಇದು ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತ ವಲಸಿಗರಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಯಾರ ಭಾರತೀಯ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ” ಎಂದು ಅವರು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read