ನಟಿ ಕಾಜೋಲ್ ಮತ್ತು ನಟ ಅಜಯ್ ದೇವಗನ್, ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಟಾರ್‌ಡಮ್ ಇಟ್ಕೊಂಡಿರೋ ನಟರು. ಈಗ ಇವರಿಬ್ಬರೂ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಇವರು ಸುದ್ದಿಯಲ್ಲಿ ಇರೋದು ಇವರ ಮುದ್ದಿನ ಮಗಳ ಕಾರಣಕ್ಕಾಗಿ. ಈ ಸ್ಟಾರ್ ನಟರ ಮಗಳು ‘ನಾಸಾ’ಳ ಬೋಲ್ಡ್ ಅವತಾರದ್ದೇ ಈಗ ಭಾರೀ ಸುದ್ದಿ.
ಕ್ರಿಸ್‌ಮಸ್, ನ್ಯೂ ಇಯರ್ ಪಾರ್ಟಿ ಅಂದ್ರೆ ಸಾಕು ಬಾಲಿವುಡ್ ಜನ ಹುಚ್ಚೆದ್ದು ಕುಣಿಯುತ್ತಾರೆ. ವಿದೇಶಗಳಿಗೆ ಹೋಗಿ ಅಲ್ಲೇ ಭರ್ಜರಿ ಪಾರ್ಟಿ ಮಾಡಿ ಎಂಜಾಯ್ ಮಾಡ್ತಿರ್ತಾರೆ. ದುಬೈನಲ್ಲಿ ನಡೆದ ಅಂತಹದ್ದೇ ಪಾರ್ಟಿಯೊಂದರಲ್ಲಿ ‘ನ್ಯಾಸಾ’ ತಮ್ಮ ಗೆಳೆಯರೊಂದಿಗೆ ಹೋಗಿದ್ದಾರೆ. ಅಲ್ಲಿ ಅವರ ಬೋಲ್ಡ್ ಅವತಾರ ನೋಡಿ ದಂಗಾದವರೇ ಹೆಚ್ಚು.
ಇದೇ ಪಾರ್ಟಿಯಲ್ಲಿ ‘ನ್ಯಾಸಾ’ ತನ್ನ ಗೆಳೆಯ ಓರ್ಹಾನ್ ಅಲಿಯಾಸ್ ಓರಿ ಜೊತೆ ತುಂಬಾ ಕ್ಲೋಸ್ ಆಗಿದ್ದನ್ನು ಪಾರ್ಟಿಯಲ್ಲಿರೋರು ಗಮನಿಸಿದ್ದರು.
ಓರಿ ತನ್ನ ಗೆಳತಿ ‘ನ್ಯಾಸಾ’ಳೊಂದಿಗೆ ಸೇರಿ ಮಾಡಿದ್ದ ಪಾರ್ಟಿಯ ಫೋಟೋ ಹಾಗೂ ವೀಡಿಯೋವನ್ನ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಈ ಫೋಟೋಗಳಲ್ಲಿ ‘ನ್ಯಾಸಾ’ ಪ್ಲಂಜಿಂಗ್ ನೆಕ್‌ಲೈನ್ ಇರುವ ಕಪ್ಪು ಬಣ್ಣದ ಪಾರ್ಟಿ ಡ್ರೆಸ್ ಹಾಕಿಕೊಂಡಿದ್ದು, ಗ್ಲಾಮರಸ್ ಆಗಿ ಮೇಕ್ ಅಪ್ ಮಾಡಿಕೊಂಡಿರೋದನ್ನ ನೋಡ್ಬಹುದು.
ಇನ್ನು ಕ್ರಿಸ್‌ಮಸ್ ಸಮಯದಲ್ಲೂ ನ್ಯಾಸಾ ಬಾಲಿವುಡ್ ನಟ ಸೈಫ್ ಅಲಿಖಾನ್ ಮಗ ಇಬ್ರಾಹಿಂ ಅಲಿಖಾನ್, ಜಾಹ್ನವಿ ಕಪೂರ್, ಖುಷಿಕಪೂರ್ ಹಾಗೂ ಗೆಳೆಯ ಓರಿ ಜೊತೆಗೆ ಸೇರಿ ಪಾರ್ಟಿ ಮಾಡಿದ್ದರು. ಆ ವಿಡಿಯೋ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಅದರ ನಂತರ ಈಗ ನ್ಯೂ ಇಯರ್ ಸೆಲೆಬ್ರೆಷನ್ ಪಾರ್ಟಿ ವಿಡಿಯೋ ಹರಿದಾಡುತ್ತಿದ್ದು, ‘ನ್ಯಾಸಾ’ಳ ಹಾಟ್ ಅವತಾರ ನೋಡಿ ನೆಟ್ಟಿಗರು ಬೆಕ್ಕಸಬೆರಗಾಗಿ ಹೋಗಿದ್ದಾರೆ.