ಐಶ್ವರ್ಯಾ ರೈ ಮತ್ತು ಬಚ್ಚನ್ ಕುಟುಂಬದ ನಡುವಿನ ಮನಸ್ತಾಪಕ್ಕೆ ಮತ್ತೆ ಸಿಕ್ತು ಫೋಟೋ ಸಾಕ್ಷ್ಯ !

Aishwarya Rai Crops Jaya Bachchan From Family Pic, Shares Amitabh-Aaradhya's Closeup - Netizens Are Sure About Rift

ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತು ಅವರ ಅತ್ತೆ ಜಯಾ ಬಚ್ಚನ್ ನಡುವೆ ಮುಸುಕಿನ ಗುದ್ದಾಟವಿದೆ. ಅತ್ತೆ- ಸೊಸೆ ನಡುವಿನ ಸಂಬಂಧ ಉತ್ತಮವಾಗಿಲ್ಲ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಆಗಾಗ್ಗೆ ಕೇಳಿಬರುತ್ತಿದ್ದವು. ಅದಕ್ಕೆ ಪುಷ್ಠಿ ನೀಡುವಂತೆ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಐಶ್ವರ್ಯ ರೈ ಮಾವ, ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅಕ್ಟೋಬರ್ 11 ರ ಬುಧವಾರದಂದು ತಮ್ಮ 81 ನೇ ಹುಟ್ಟುಹಬ್ಬವನ್ನು ಮನೆಯಲ್ಲಿ ಆಚರಿಸಿಕೊಂಡರು.

ಮನೆಯಲ್ಲಿ ನಡೆದ ಹುಟ್ಟುಹಬ್ಬ ಸಂಭ್ರಮಾಚರಣೆಯಲ್ಲಿ ಬಿಗ್ ಬಿ, ಪತ್ನಿ ಜಯಾ ಬಚ್ಚನ್, ಮೊಮ್ಮಕ್ಕಳಾದ ಆರಾಧ್ಯ ಬಚ್ಚನ್ ಮತ್ತು ಅಗಸ್ತ್ಯ ನಂದಾ, ನವ್ಯ ನಂದಾ ಇದ್ದರು. ಈ ಸಂಭ್ರಮಾಚರಣೆಯ ಫೋಟೋವನ್ನ ನವ್ಯಾ ನಂದಾ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡು ತಮ್ಮ ತಾತನಿಗೆ ಹುಟ್ಟುಹಬ್ಬದ ಶುಭ ಕೋರಿದ್ದರು.

ಇದೇ ಫೋಟೋವನ್ನ ಗುರುವಾರ ನಟಿ ಐಶ್ವರ್ಯಾ ಬಚ್ಚನ್ ಹಂಚಿಕೊಡಿದ್ದಾರೆ. ಆದರೆ ಇದರಲ್ಲಿ ತಮ್ಮ ಮಗಳು ಆರಾಧ್ಯ ಮತ್ತು ಮಾವ ಅಮಿತಾಬ್ ಬಚ್ಚನ್ ಹೊರತುಪಡಿಸಿ ಉಳಿದೆಲ್ಲವರನ್ನ ಕ್ರಾಪ್ ಮಾಡಿ ಫೋಟೋ ಹಾಕಿದ್ದಾರೆ. ಜಯಾ ಬಚ್ಚನ್ ಅವರನ್ನ ಫೋಟೋದಲ್ಲಿ ಕ್ರಾಪ್ ಮಾಡಿರೋದ್ರಿಂದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅತ್ತೆ- ಸೊಸೆ ನಡುವಿನ ಸಂಬಂಧ ಹದಗೆಟ್ಟಿದೆ ಎಂದು ಮತ್ತೆ ಹೇಳುತ್ತಿದ್ದಾರೆ. ಫೋಟೋ ವೈರಲ್ ಆದ ತಕ್ಷಣ ನೆಟ್ಟಿಗರು ಐಶ್ವರ್ಯಾ ಮತ್ತು ಬಚ್ಚನ್ ಕುಟುಂಬದ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಖಚಿತವಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read