ಒಟ್ಟಿಗೆ ಕಾಣಿಸಿಕೊಂಡ ಅಭಿಷೇಕ್‌ – ಐಶ್ವರ್ಯಾ ; ಅಭಿಮಾನಿಗಳಿಗೆ ಸಂತಸ | Photo

ಬಾಲಿವುಡ್‌ನ ಜನಪ್ರಿಯ ಜೋಡಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರ ಪುತ್ರ ಕೊನಾರ್ಕ್ ಗೋವಾರಿಕರ್ ಅವರ ಮದುವೆಯಲ್ಲಿ ಭಾಗವಹಿಸಿ, ತಾರಾ ಮೆರುಗು ನೀಡಿದ್ದಾರೆ. ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಅಶುತೋಷ್ ಗೋವಾರಿಕರ್ ಅವರ ಪುತ್ರ ಕೊನಾರ್ಕ್ ಗೋವಾರಿಕರ್ ಮತ್ತು ನಿಯತಿ ಕನಕಿಯಾ ಅವರ ವಿವಾಹ ಆರತಕ್ಷತೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಇಸ್ಕಾನ್‌ನ ಹರಿನಮ್ ದಾಸ್ ಅವರನ್ನು ಭೇಟಿಯಾದರು. ಹರಿನಮ್ ದಾಸ್ ಹಂಚಿಕೊಂಡಿರುವ ಫೋಟೋಗಳಲ್ಲಿ, ಅಭಿಷೇಕ್ ಬಚ್ಚನ್ ಅವರು ಕೈ ಮುಗಿದು ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿರುವುದು ಮತ್ತು ಐಶ್ವರ್ಯಾ ರೈ ಬಚ್ಚನ್ ಸಂತೋಷದಿಂದ ಸಂವಹನ ನಡೆಸುತ್ತಿರುವುದು ಕಂಡುಬಂದಿದೆ.

ಐಶ್ವರ್ಯಾ ಮತ್ತು ಅಭಿಷೇಕ್ ಇಬ್ಬರೂ ಅಂದದ ಉಡುಗೆಗಳಲ್ಲಿ ಮಿಂಚುತ್ತಿದ್ದರು. ಐಶ್ವರ್ಯಾ ರೈ ಬಚ್ಚನ್ ಚಿನ್ನದ ಕಸೂತಿ ಹೊಂದಿರುವ ಸಾಂಪ್ರದಾಯಿಕ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದು, ಮ್ಯಾಚಿಂಗ್ ಪೊಟ್ಲಿ ಬ್ಯಾಗ್ ಅನ್ನು ಹಿಡಿದಿದ್ದರು.ಅಭಿಷೇಕ್ ಬಚ್ಚನ್ ಬಂದ್‌ಗಲಾ ಸೆಟ್ ಧರಿಸಿದ್ದರು.

ಇತರ ಫೋಟೋಗಳಲ್ಲಿ, ಐಶ್ವರ್ಯಾ ಮತ್ತು ಅಭಿಷೇಕ್ ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರೊಂದಿಗೆ ಸಂವಹನ ನಡೆಸುತ್ತಿರುವುದು ಕಂಡುಬಂದಿದೆ. ಮತ್ತೊಂದು ಫೋಟೋದಲ್ಲಿ, ಐಶ್ವರ್ಯಾ ಮತ್ತು ಅಭಿಷೇಕ್ ನವವಿವಾಹಿತರಾದ ಕೊನಾರ್ಕ್ ಗೋವಾರಿಕರ್ ಮತ್ತು ನಿಯತಿ ಕನಕಿಯಾ ಅವರೊಂದಿಗೆ ಪೋಸ್ ನೀಡುತ್ತಿದ್ದಾರೆ. ಈ ಫೋಟೋದಲ್ಲಿ ಪೂಜಾ ಹೆಗ್ಡೆ ಮತ್ತು ಇತರರು ಸಹ ಇದ್ದಾರೆ.

ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಹಬ್ಬದೂಟವಾಗಿದೆ. ಅವರ ರಾಯಲ್ ಲುಕ್ ಮತ್ತು ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

 

View this post on Instagram

 

A post shared by Aishwarya Rai Team🇲🇺 (@aishwarya_raifan)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read