ಬ್ಯಾಗ್ ​ನಲ್ಲಿದ್ದ ವಿಸ್ಕಿ ಬಾಟಲ್‌ ಮುಕ್ಕಾಲು ಪಾಲು ಖಾಲಿ….! ಟ್ವೀಟ್‌ ಮಾಡಿ ಸಂಕಟ ತೋಡಿಕೊಂಡ ವಿಮಾನ ಪ್ರಯಾಣಿಕ

ವಿಚಿತ್ರ ಘಟನೆಯೊಂದರಲ್ಲಿ ಯುನೈಟೆಡ್ ಏರ್‌ಲೈನ್ಸ್ ಪ್ರಯಾಣಿಕನೊಬ್ಬ ತಂದಿದ್ದ ಲಗೇಜ್‌ನಲ್ಲಿ ಪ್ಯಾಕ್ ಮಾಡಲಾಗಿದ್ದ ವಿಸ್ಕಿಯ ಬಾಟಲಿ ಓಪನ್​ ಆಗಿರುವುದಾಗಿ ದೂರು ದಾಖಲಿಸಿದ್ದಾನೆ. ಮಾತ್ರವಲ್ಲದೇ ಮುಕ್ಕಾಲು ಪಾಲು ವಿಸ್ಕಿ ಕೂಡ ಖಾಲಿಯಾಗಿರುವುದಾಗಿ ಹೇಳಿದ್ದಾನೆ.

ಟ್ವಿಟರ್‌ನಲ್ಲಿ ಕ್ರಿಸ್ಟೋಫರ್ ಆಂಬ್ಲರ್ ಗ್ಲೆನ್‌ಮೊರಂಗಿ ಎಂಬಾತ ಈ ವಿಷಯ ತಿಳಿಸಿದ್ದಾರೆ. ಶೇರ್​ ಮಾಡಿರುವ ಚಿತ್ರದಲ್ಲಿ, ಸೀಲ್ ತೆರೆದಿರುವುದನ್ನು ನೀವು ಸ್ಪಷ್ಟವಾಗಿ ನೋಡಬಹುದು. ಇದನ್ನು ಪ್ಯಾಕ್ ಮಾಡಿದಾಗ ಹೊಸದಾಗಿ ಮೊಹರು ಮಾಡಲಾಗಿತ್ತು. ಆದರೆ ಈಗ ಸೀಲ್ ತೆರೆಯಲಾಗಿದೆ ಎಂದಿದ್ದಾನೆ. ಇದಕ್ಕೆ 45 ಸಾವಿರ ರೂಪಾಯಿ ಬೆಲೆ ತೆತ್ತಿದ್ದು, ಅದೀಗ ಖಾಲಿಯಾಗಿದೆ ಎಂದಿದ್ದಾರೆ.

ಈ ಟ್ವಿಟರ್​ನ್ನು ಯುನೈಟೆಡ್ ಏರ್‌ಲೈನ್ಸ್ ಟ್ಯಾಗ್​ ಮಾಡಲಾಗಿತ್ತು. ಕೂಡಲೇ ಪ್ರತಿಕ್ರಿಯೆ ನೀಡಿರುವ ಏರ್​ಲೈನ್ಸ್​ ಇದಕ್ಕಾಗಿ ವಿಷಾದಿಸುತ್ತೇವೆ ಎಂದು ಹೇಳಿದೆ.

“ದಯವಿಟ್ಟು ಪ್ರಯಾಣ ಮತ್ತು ಬ್ಯಾಗೇಜ್ ಕ್ಲೈಮ್ ಸಂಖ್ಯೆಗಾಗಿ ನಿಮ್ಮ ದೃಢೀಕರಣ ಸಂಖ್ಯೆಯನ್ನು ಡಿಎಂ ಮಾಡಿ, ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಏರ್​ಲೈನ್ಸ್​ ಹೇಳಿದೆ.

ಈ ಟ್ವೀಟ್​ಗೆ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ. ಏರ್​ಲೈನ್ಸ್​ನ ಯಾವುದಾದರೂ ಸಿಬ್ಬಂದಿ ಅಲ್ಲಿಯೇ ತೂರಾಡುತ್ತಿದ್ದಿರಬಹುದು. ಹೀಗೆ ಸಿಸಿ ಟಿವಿಯಲ್ಲಿ ನೋಡಿದರೆ ಕದ್ದವನನ್ನು ಪತ್ತೆ ಹಚ್ಚಬಹುದು ಎಂದಿದ್ದಾರೆ ಕೆಲವು ಕಮೆಂಟಿಗರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read