ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ನೀಡಲಾಗಿದ್ದ ಆಮ್ಲೆಟ್‌ನಲ್ಲಿ ಜಿರಳೆ ಕಂಡುಬಂದಿದೆ ಎಂದು ಏರ್ ಇಂಡಿಯಾ ಪ್ರಯಾಣಿಕರೊಬ್ಬರು ದೂರಿದ್ದು, ಹೆಚ್ಚಿನ ತನಿಖೆಗಾಗಿ ಅಡುಗೆ ಸೇವೆ ಒದಗಿಸುವವರಿಗೆ ಸೂಚಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
2024 ರ ಸೆಪ್ಟೆಂಬರ್ 17 ರಂದು DEL ನಿಂದ JFK ಗೆ ಕಾರ್ಯನಿರ್ವಹಿಸುವ AI 101 ನಲ್ಲಿ ಅವರಿಗೆ ನೀಡಲಾದ ಆನ್ ಬೋರ್ಡ್ ಊಟದಲ್ಲಿ ಜಿರಳೆ ಕಂಡು ಬಂದಿದೆ ಎಂದು ಮಹಿಳೆ ಈ ಬಗ್ಗೆ ಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್ ಬಗ್ಗೆ ನಮಗೆ ತಿಳಿದಿದೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ ಮತ್ತು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿಯಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ನೀಡಲಾದ ಆಮ್ಲೆಟ್‌ನಲ್ಲಿ ಜಿರಳೆ ಕಂಡುಬಂದಿದೆ. ನಾವು ಇದನ್ನು ನೋಡುವ ವೇಳೆಗಾಗಲೇ ನನ್ನ 2 ವರ್ಷದ ಮಗು ನನ್ನೊಂದಿಗೆ ಅರ್ಧಕ್ಕಿಂತ ಹೆಚ್ಚಿನದನ್ನು ತಿಂದಿದೆ. ಇದರ ಪರಿಣಾಮವಾಗಿ ಫುಡ್ ಪಾಯ್ಸನ್ ನಿಂದ ಬಳಲುತ್ತಿದೆ ಎಂದು ಅವರು ಹೇಳಿದ್ದಾರೆ.
ವಿಮಾನದಲ್ಲಿ ನೀಡಲಾದ ಆಹಾರ ಪದಾರ್ಥಗಳ ಕಿರು ವೀಡಿಯೊ ಮತ್ತು ಚಿತ್ರಗಳನ್ನು ಸಹ ಹಂಚಿಕೊಂಡಿದ್ದು, ಏರ್ ಇಂಡಿಯಾ, ವಿಮಾನಯಾನ ನಿಯಂತ್ರಕ ಡಿಜಿಸಿಎ ಮತ್ತು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರನ್ನು ಟ್ಯಾಗ್ ಮಾಡಿದ್ದಾರೆ.
ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.
https://twitter.com/suyeshasavant/status/1839864215734980816