ಅಮರಾವತಿ: ವಿಜಯವಾಡದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿರುವ ಘಟನೆ ನಡೆದಿದೆ.
ವಿಜಯಾಡದಿಂದ ಟೇಕ್ ಆಫ್ ಆಗಿ ರನ್ ವೇಯತ್ತ ತೆರಳುತ್ತಿದ್ದ AI 9841 ವಿಮಾನಕ್ಕೆ ಹದ್ದುವೊಂದು ಡಿಕ್ಕಿ ಹೊಡೆದಿದೆ. ವಿಮಾನದ ಮುಖಕ್ಕೆ ಹಕ್ಕಿ ಡಿಕ್ಕಿಯಾಗಿದ್ದು, ತಕ್ಷಣ ವಿಮಾನ ಹಾರಾಟವನ್ನು ರದ್ದುಗೊಳಿಸಲಾಯಿತು.
ವಿಮಾನದಲ್ಲಿ 90 ಜನ ಪ್ರಯಾಣಿಕರಿದ್ದರು. ಪ್ರಯಾಣಿಕರು ಸುರಕ್ಷಿತವಾಗಿದ್ದು, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಇಂದು ಬೇಳಿಗ್ಗೆ 8:15ಕ್ಕೆ ವಿಜಯವಾಡದಿಂದ ವಿಮಾನ ಹೊರಟು ಬೆಳಿಗ್ಗೆ 9:40ಕ್ಕೆ ಬೆಂಗಳೂರು ಏರ್ ಪೋರ್ಟ್ ತಲುಪ ಬೇಕಾಗಿತ್ತು. ಆದರೆ ವಿಮಾನಕ್ಕೆ ಹಕ್ಕಿ ಡಿಕ್ಕಿಯಾದ ಪರಿಣಾಮ ಈ ವಿಮಾನ ಪ್ರಯಾಣ ರದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.