ರಾಜ್ಯಪಾಲರ ಬಿಟ್ಟು ವಿಮಾನ ಟೇಕಾಫ್: ತನಿಖೆಗೆ ಆದೇಶಿಸಿದ ಏರ್ ಏಷ್ಯಾ

ಬೆಂಗಳೂರು: ಗುರುವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರನ್ನು ಕರೆದೊಯ್ಯದೆ ವಿಮಾನ ಟೇಕಾಫ್ ಆದ ಹಿನ್ನಲೆಯಲ್ಲಿ ಏರ್ ಏಷ್ಯಾ ತನಿಖೆಗೆ ಆದೇಶಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಘಟನೆಯ ಬಗ್ಗೆ ಮಾತನಾಡಿದ ಏರ್ ಏಷ್ಯಾ ವಕ್ತಾರರು, ಘಟನೆಗೆ ನಾವು ವಿಷಾದಿಸುತ್ತೇವೆ. ತನಿಖೆ ನಡೆಸಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಏರ್‌ ಲೈನ್‌ ನ ಹಿರಿಯ ನಾಯಕತ್ವ ತಂಡವು ಕಳವಳಗಳನ್ನು ಪರಿಹರಿಸಲು ಗವರ್ನರ್ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

ವೃತ್ತಿಪರತೆಯ ಅತ್ಯುನ್ನತ ಮಾನದಂಡಗಳಿಗೆ ನಮ್ಮ ಬದ್ಧತೆ ಮತ್ತು ಪ್ರೋಟೋಕಾಲ್‌ ನ ಅನುಸರಣೆ ಅಚಲವಾಗಿ ಉಳಿದಿದೆ. ಗವರ್ನರ್ ಕಚೇರಿಯೊಂದಿಗಿನ ನಮ್ಮ ಸಂಬಂಧವನ್ನು ನಾವು ಗೌರವಿಸುತ್ತೇವೆ ಎಂದು ವಕ್ತಾರರು ಹೇಳಿದ್ದಾರೆ.

ರಾಜ್ಯಪಾಲರು ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಕಾಯುತ್ತಿದ್ದರು. ಆದರೆ, ಅವರಿಲ್ಲದೆ ವಿಮಾನ ಟೇಕ್ ಆಫ್ ಆಗಿತ್ತು. ವೇಳಾಪಟ್ಟಿಯ ಪ್ರಕಾರ, ಗವರ್ನರ್ ಏರ್ ಏಷ್ಯಾ ವಿಮಾನದಲ್ಲಿ(I15972) ಹೈದರಾಬಾದ್‌ಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಬೇಕಿತ್ತು.

ಘಟನೆಯ ನಂತರ, ಗವರ್ನರ್ ಪ್ರೋಟೋಕಾಲ್ ಅಧಿಕಾರಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಇದು ಪ್ರೋಟೋಕಾಲ್ ಉಲ್ಲಂಘನೆ ಎಂದು ಹೇಳಲಾಗಿದೆ. ವಿಮಾನ ನಿಲ್ದಾಣದಲ್ಲಿ 90 ನಿಮಿಷಗಳ ಕಾಲ ಕಾದ ನಂತರ ರಾಜ್ಯಪಾಲರು ಹೈದರಾಬಾದ್‌ಗೆ ಮತ್ತೊಂದು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read