ವಿದ್ಯುತ್ ಕಳ್ಳತನ ಪರಿಶೀಲನೆಗೆ ಬಂದ ಸಿಬ್ಬಂದಿ ಮೇಲೆ ಎಐಎಂಐಎಂ ಪಕ್ಷದ ಸದಸ್ಯರಿಂದ ಹಲ್ಲೆ

ವಿದ್ಯುತ್ ಕಳ್ಳತನ ಪರಿಶೀಲನೆಗೆ ಬಂದಿದ್ದ ವಿದ್ಯುತ್ ಇಲಾಖೆಯ ಕಾರ್ಮಿಕರನ್ನು ಎಐಎಂಐಎಂ ಮುಖಂಡರೊಬ್ಬರು ಹೈದರಾಬಾದ್ ನಲ್ಲಿ ಥಳಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ವೈರಲ್ ವಿಡಿಯೋದಲ್ಲಿ ಕಾರ್ವಾನ್ ವಿಧಾನಸಭಾ ಕ್ಷೇತ್ರದ ಮೆಹಬೂಬ್ ಕಾಲೋನಿಯಲ್ಲಿ ವಿದ್ಯುತ್ ಇಲಾಖೆಯ ಕಾರ್ಮಿಕರನ್ನು ಥಳಿಸಿರುವ ವಿಡಿಯೋವನ್ನ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಉದ್ಯೋಗಿಗೆ ಥಳಿಸಿದ ಎಐಎಂಐಎಂ ಪಕ್ಷದ ಸದಸ್ಯನನ್ನು ಮೊಹಮ್ಮದ್ ಅಜಮ್ ಎಂದು ಗುರುತಿಸಲಾಗಿದೆ.

“ದಯವಿಟ್ಟು ಹೈದರಾಬಾದ್‌ನಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ “ಗೂಂಡಾ ರಾಜ್” ನ ಆಘಾತಕಾರಿ ವೀಡಿಯೊವನ್ನು ನೋಡಿ. ವಿದ್ಯುತ್ ಕಳ್ಳತನವನ್ನು ತಡೆಯಲು ಹೋದ ವಿದ್ಯುತ್ ಇಲಾಖೆ ನೌಕರರ ಮೇಲೆ MIM ನಾಯಕ ಮೊಹಮ್ಮದ್ ಅಜಮ್ ಮತ್ತು ಅವರ ಕುಟುಂಬ ಸದಸ್ಯರು ಕಾರ್ವಾನ್ ನ ಮೆಹಬೂಬ್ ಕಾಲೋನಿಯಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ತೆಲಂಗಾಣ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಿ ಎಂದು ವಿಡಿಯೋನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ವಿದ್ಯುತ್ ಕಳ್ಳತನದಿಂದ ಇಲಾಖೆಗೆ ದಿನಕ್ಕೆ 70 ಲಕ್ಷ ನಷ್ಟವಾಗಿತ್ತದೆ ಎಂಬುದನ್ನೂ ಟ್ವೀಟ್ ನಲ್ಲಿ ಹೇಳಲಾಗಿದೆ.

ಹಳೆ ಹೈದರಾಬಾದ್‌ನಲ್ಲಿ ವಿದ್ಯುತ್ ಕಳ್ಳತನದ ದೂರುಗಳು ಮತ್ತು ಸಮಸ್ಯೆಗಳು ಸಾಮಾನ್ಯವಾಗಿದೆ. ಈ ಬಗ್ಗೆ ಈ ಹಿಂದೆ ಹಲವು ಜನರು ಮತ್ತು ನಿವಾಸಿಗಳು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

https://twitter.com/prashantchiguru/status/1675515166216294401?ref_src=twsrc%5Etfw%7Ctwcamp%5Etweetembed%7Ctwterm

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read