ಮಕ್ಕಳ ರಕ್ಷಣೆಗಾಗಿ ಪ್ರಾಣವನ್ನೇ ಒತ್ತೆ ಇಟ್ಟ ತಾಯಿ ; ವಿಡಿಯೋ ವೈರಲ್ | Watch

ಅಹ್ಮದಾಬಾದ್‌ನ ಖೋಖ್ರಾ ಏರಿಯಾದಲ್ಲಿ ನಡೆದ ಬೆಂಕಿ ಅವಘಡದಲ್ಲಿ ತಾಯಿಯೊಬ್ಬರು ತೋರಿದ ಧೈರ್ಯ ನಿಜಕ್ಕೂ ಬೆರಗುಗೊಳಿಸುವಂತಿದೆ. ಪರಿಷ್ಕಾರ್ 1 ಅಪಾರ್ಟ್‌ಮೆಂಟ್‌ನ ಮೂರನೇ ಫ್ಲೋರ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ, ದಟ್ಟ ಹೊಗೆಯಿಂದ ತುಂಬಿದ್ದ ಮನೆಯಲ್ಲಿ ತನ್ನಿಬ್ಬರು ಮುದ್ದು ಮಕ್ಕಳನ್ನ ಆಕೆ ಕೆಳಗಿಳಿಸಿ ಕಾಪಾಡಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಈ ಹೃದಯಸ್ಪರ್ಶಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡಿದವರೆಲ್ಲಾ ಆ ತಾಯಿಯ ಕೆಚ್ಚೆದೆಯನ್ನ ಕೊಂಡಾಡ್ತಿದ್ದಾರೆ. ವಿಡಿಯೋದಲ್ಲಿ ಅಪಾರ್ಟ್‌ಮೆಂಟ್‌ನಿಂದ ದಟ್ಟವಾದ ಹೊಗೆ ಹೊರಬರ್ತಿರೋದು ಸ್ಪಷ್ಟವಾಗಿ ಕಾಣ್ತಿದೆ. ಇಂತಹ ಭಯಾನಕ ಸನ್ನಿವೇಶದಲ್ಲೂ ಆ ತಾಯಿ ಎದೆಗುಂದದೆ, ತನ್ನ ಬಾಲ್ಕನಿಯಲ್ಲಿ ನಿಂತು ಕೆಳಗಡೆ ನೆರೆಹೊರೆಯವರು ಮತ್ತೆ ಸಹಾಯಕ್ಕೆ ಬಂದಿದ್ದವರಿಗೆ ತನ್ನ ಮಕ್ಕಳನ್ನ ಒಬ್ಬೊಬ್ಬರಾಗಿ ಸುರಕ್ಷಿತವಾಗಿ ಇಳಿಸಿಕೊಟ್ಟಿದ್ದಾರೆ.

ಮಕ್ಕಳನ್ನ ರಕ್ಷಿಸುವಾಗ ಆ ತಾಯಿ ಮತ್ತೆ ಕೆಳಗಿದ್ದ ಜನ ತೋರಿದ ಸಮಯಪ್ರಜ್ಞೆ ಮತ್ತೆ ಒಬ್ಬರಿಗೊಬ್ಬರು ಸಹಾಯ ಮಾಡಿದ ರೀತಿ ನಿಜಕ್ಕೂ ಗ್ರೇಟ್. ಮಾಧ್ಯಮದ ವರದಿಗಳ ಪ್ರಕಾರ, ಈ ಬೆಂಕಿ ಅವಘಡ ಸಂಜೆ ನಾಲ್ಕು ಗಂಟೆ ಸುಮಾರಿಗೆ ಪರಿಷ್ಕಾರ್ 1 ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ಶುರುವಾಯ್ತು. ಆದ್ರೆ ಆ ತಾಯಿಯ ದಿಟ್ಟತನದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಕೆಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read