BREAKING : ಬೃಹತ್ ಚಿನ್ನ ಸಾಗಾಣೆ ಕೇಸ್ ಬೇಧಿಸಿದ DRI ಅಧಿಕಾರಿಗಳು: 80 ಕೋಟಿ ಚಿನ್ನದ ಬಿಸ್ಕೆಟ್, ದುಬಾರಿ ಬೆಲೆಯ ವಾಚ್ ಗಳು ಜಪ್ತಿ

ಅಹಮದಾಬಾದ್: ನಟಿ ರನ್ಯಾ ರಾವ್ ಪ್ರಕರಣದ ಬಳಿಕ ಡಿಆರ್ ಐ ಅಧಿಕಾರಿಗಳು ಮತ್ತೊಂದು ಬೃಹತ್ ಅಕ್ರಮ ಚಿನ್ನ ಸಾಗಾಟ ಜಾಲವನ್ನು ಬೇಧಿಸಿದ್ದಾರೆ. ಅಹಮದಾಬಾದ್ ನಲ್ಲಿ ಬರೋಬ್ಬರಿ 80 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಹಮದಾಬಾದ್ ನ ಪಲ್ಡಿ ಪ್ರದೇಶದಲ್ಲಿ ಡಿಆರ್ ಐ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ 87.92 ಕೆಜಿ ಚಿನ್ನದ ಬಿಸ್ಕೆಟ್, ದುಬಾರಿ ಬೆಲೆಯ ವಾಚ್ ಗಳು, ವಜ್ರಖಚಿತ ಪಾಟೆಕ್ ಪಿಲಿಪ್ ವಾಚ್, ಜಾಕೋಬ್ & ಕೋ, ಫ್ರಾಂಕ್ ಮುಲ್ಲರ್ ಬ್ರ್ಯಾಂಡ್ ವಾಚ್ ಗಳು ಹಾಗೂ 1 ಕೋಟಿ 37 ಲಕ್ಷ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಿದ್ದಾರೆ.

ಮಾರ್ಚ್ 17ರಂದು ಗುಜರಾತ್ ಡಿಆರ್ ಐ ಹಾಗೂ ಎಟಿಎಸ್ ಅಧಿಕಾರಿಗಳು ಜಂಟಿ ಕಾರ್ಯಾಚಾರಣೆ ನಡೆಸಿದ್ದು, ಬೃಹತ್ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ. ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಎಲ್ಲಾ ಚಿಇನ್ನದ ಗಟ್ಟಿಗಳು, ವಾಚ್ ಗಳು ಹಾಗೂ ನಗದು ಹಣ ಹಡಗಿನ ಮೂಲಕ ತಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read