ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 274 ಜನರು ಸಾವನ್ನಪ್ಪಿರುವ ಬಗ್ಗೆ ತನಿಖೆ ಚುರುಕುಗೊಂಡಿದೆ.
ವಿಮಾನ ದುರಂತದ ಬಗ್ಗೆ ಅಹಮದಾಬಾದ್ ನ ಮೆಘಾನಿ ನಗರ ಪೊಲೀಸರು ಆಕಸ್ಮಿಕ ಸಾವು ( ಯುಡಿ/0019/2025) ಎಂದು ಕೇಸ್ ದಾಖಲಿಸಿಕೊಂಡಿದ್ದಾರೆ.
ಇದು ಎಫ್ ಐ ಆರ್ ಅಲ್ಲ. ಬದಲಾಗಿ ಪೊಲೀಸ್ ಠಾಣೆ ಡೈರಿಯಲ್ಲಿ ಘಟನೆಯ ನೋಂದಣಿಯಾಗಿದೆ ತನಿಖೆಯ ಫಲಿತಾಂಶದ ಆಧಾರದ ಮೇಲೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 194 ಅಡಿ ಎಫ್ ಐ ಆರ್ ಆಗಿ ಪರಿವರ್ತಿಸಬಹುದು.