ಆತ್ಮಹತ್ಯೆಗೂ ಮುನ್ನ ಉದ್ಯಮಿಯಿಂದ ಘೋರ ಕೃತ್ಯ: ವಿಷವುಣಿಸಿ ತಾಯಿ, ಪುತ್ರನ ಕೊಲೆ

ಆಗ್ರಾ: ಉದ್ಯಮಿ, ಅವರ ತಾಯಿ ಮತ್ತು ಮಗ ಭಾನುವಾರ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಿಂದ ಬೆಳಕಿಗೆ ಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ನ್ಯೂ ಆಗ್ರಾ ಪೊಲೀಸ್ ಠಾಣೆಯ ಲಾಯರ್ಸ್ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ವ್ಯಕ್ತಿ ತನ್ನ ತಾಯಿ ಮತ್ತು 12 ವರ್ಷದ ಮಗನಿಗೆ ವಿಷವುಣಿಸಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯನ್ನು ತರುಣ್ ಚೌಹಾಣ್ ಎಂದು ಗುರುತಿಸಲಾಗಿದೆ. ಮನೆಯ ಸಹಾಯಕರು ಅವರ ಮನೆಗೆ ಹೋದಾಗ ತರುಣ್ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ತಾಯಿ ಮತ್ತು 12 ವರ್ಷದ ಮಗನ ಶವಗಳು ಹಾಸಿಗೆಯ ಮೇಲೆ ಬಿದ್ದಿರುವುದು ಕಂಡುಬಂದಿದೆ. ಸೇವಕಿ ಕೂಡಲೇ ನೆರೆಹೊರೆಯವರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ತರುಣ್ ಚೌಹಾಣ್ ಅವರ ಶವವನ್ನು ಕುಣಿಕೆಯಿಂದ ಹೊರತೆಗೆದರು. ಘಟನೆಯ ಸಮಯದಲ್ಲಿ, ವ್ಯಕ್ತಿಯ ಪತ್ನಿ ಮನೆಯಿಂದ ದೂರವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಉಪ ಪೊಲೀಸ್ ಆಯುಕ್ತ ಸೂರಜ್ ರೈ ಪ್ರಕಾರ, ತರುಣ್ ಚೌಹಾಣ್ ಅವರ ಪತ್ನಿ ರಾಜಸ್ಥಾನದ ಸಿಕಾರ್‌ನಲ್ಲಿರುವ ಖತು ಶ್ಯಾಮ್ ಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ತಾಯಿ ಮತ್ತು ಮಗ ವಿಷ ಸೇವಿಸಿದ್ದಾರೆ ಎಂದು ಪ್ರಾಥಮಿಕ ಸಾಕ್ಷ್ಯಗಳು ಸೂಚಿಸಿವೆ. ತರುಣ್ ಚೌಹಾಣ್ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಊಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನಾ ಸ್ಥಳದಲ್ಲಿ ಪುರಾವೆಗಳನ್ನು ಸಂಗ್ರಹಿಸುತ್ತಿದ್ದು, ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read