BIG NEWS : ‘PSI’ ನೇಮಕಾತಿ ಹಗರಣದ ಬೆನ್ನಲ್ಲೇ ಕಾನ್ಸ್ ಟೇಬಲ್ ಪರೀಕ್ಷೆಯಲ್ಲೂ ಅಕ್ರಮ : ನಾಲ್ವರು ಸಿಸಿಬಿ ವಶಕ್ಕೆ

ಬೆಂಗಳೂರು : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ  ಸಶಸ್ತ್ರಮೀಸಲು ಪೊಲೀಸ್ ಪಡೆಯ  ) ಕಾನ್ ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲೂ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಅಕ್ರಮ ಎಸಗಲು ಕೆಲ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದ ಆರೋಪದಡಿ ನಾಲ್ವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೊಪ್ಪಳ ಜಿಲ್ಲೆ ಕುಷ್ಠಗಿ ಮೂಲದ ಬಸವರಾಜ್, ದಿಲೀಪ್, ತಿಮ್ಮೇಗೌಡ ಮತ್ತು ತುಮಕೂರು ಚಿಕ್ಕನಾಯಕನಹಳ್ಳಿ ಮೂಲದ ಹರಿಪ್ರಸಾದ್ ಎಂಬುವರನ್ನು  ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಪರೀಕ್ಷೆಗೆ ಒಂದು ದಿನ ಮುನ್ನ ಆರೋಪಿಗಳು ಅಭ್ಯರ್ಥಿಗಳನ್ನ ಒಂದೆಡೆ ಸೇರಲು ಹೇಳಿದ್ದರು. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನೀಡಲು ಏಜೆಂಟರು ತಯಾರಾಗಿದ್ದರು. ಇದೀಗ ಸಿಸಿಬಿ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಮುಂದಾಗಿದ್ದ ನಾಲ್ವರು ಏಜೆಂಟ್​​ಗಳನ್ನ ಬಂಧಿಸಿದ್ದಾರೆ

ಈ ಆರೋಪಿಗಳು 2018ರಲ್ಲಿ ನಡೆದಿದ್ದ ಕಾನ್ ಸ್ಟೇಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು,  ನಂತರ  ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.  ಬಳಿಕ ಭಾನುವಾರ ರಾಜ್ಯದಲ್ಲಿ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಎಸಗುವ ಸಂಬಂಧ ಆರೋಪಿಗಳು ಕೆಲದಿನಗಳ ಹಿಂದೆ ಕೆಲ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read