ಐಪಿಎಲ್‌ಗೆ ಬಳಿಕ ಹೊಸ ಕಂಟೆಂಟ್ ಮೇಲೆ ಶುಲ್ಕ ವಿಧಿಸಲಿದೆ ಜಿಯೋ ಸಿನೆಮಾ

ಜಗತ್ತಿನ ಅತಿ ದೊಡ್ಡ ಕ್ರೀಡಾ ಕೂಟಗಳಲ್ಲಿ ಒಂದಾಗಿರುವ ಐಪಿಎಲ್‌ ಎಂದರೆ ಭಾರತದಲ್ಲಿ ಬೇಸಿಗೆ ಕಾಲದುದ್ದಕ್ಕೂ ನೆಡೆಯುವ ಜಾತ್ರೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ?

ಕ್ರೀಡಾಕೂಟಗಳ ನೇರ ಪ್ರಸಾರದ ಕ್ಷೇತ್ರಕ್ಕಿಳಿದಿರುವ ರಿಲಾಯನ್ಸ್‌ ಸಮೂಹದ ಜಿಯೋ ಮಾಧ್ಯಮ ಫಿಫಾ ವಿಶ್ವಕಪ್‌ ಅನ್ನು ಭಾರತದಲ್ಲಿ ಉಚಿತವಾಗಿ ಬಿತ್ತರಿಸಿತ್ತು. ಇದೀಗ ಐಪಿಎಲ್‌ ಪಂದ್ಯಗಳನ್ನೂ ಸಹ ಜಿಯೋ ಸಿನೆಮಾಸ್‌ನಲ್ಲಿ ಉಚಿತವಾಗಿ ಬಿತ್ತರಿಸಲಾಗುತ್ತಿದೆ.

ಇದೀಗ ಇನ್ನಷ್ಟು ಮೂವಿಗಳು ಹಾಗೂ ಧಾರಾವಾಹಿಗಳೊಂದಿಗೆ ವ್ಯಾಪಕವಾಗುವ ಇರಾದೆ ತೋರುತ್ತಿರುವ ರಿಲಾಯನ್ಸ್‌, ಐಪಿಎಲ್‌ 2023 ಮುಗಿಯುತ್ತಲೇ ತನ್ನ ಕಂಟೆಂಟ್‌ಗೆ ಶುಲ್ಕ ವಿಧಿಸುವುದಾಗಿ ತಿಳಿಸುತ್ತಿದೆ.

ಈ ಸಂಬಂಧ ಬೆಲೆ ಯೋಜನೆಗಳನ್ನು ಅಂತಿಮಗೊಳಿಸುವ ಯತ್ನದಲ್ಲಿರುವ ರಿಲಾಯನ್ಸ್, ಸಿನೆಮಾ ಹಾಗೂ ಧಾರಾವಾಹಿಗಳನ್ನು ತನ್ನ ಪ್ಲಾಟ್‌ಫಾರಂನಲ್ಲಿ ನೋಡಲು ಶುಲ್ಕ ವಿಧಿಸಲಿದೆ.

ಸದ್ಯಕ್ಕೆ ಐಪಿಎಲ್‌ನ ಪಂದ್ಯಗಳು ಜಿಯೋ ಸಿನೆಮಾದಲ್ಲಿ ಏರ್‌ಟೆಲ್, ವಿ, ಬಿಎಸ್‌ಎನ್‌ಎಲ್ ಹಾಗೂ ಜಿಯೋ ಮೊಬೈಲ್ ಬಳಕೆದಾರರಿಗೆ ಉಚಿತವಾಗಿ ನೋಡಲು ಅವಕಾಶ ನೀಡಲಾಗಿದೆ.

ಜಿಯೋದ ಪ್ರತಿಸ್ಫರ್ಧಿ ಡಿಸ್ನಿ-ಹಾಟ್‌ಸ್ಟಾರ್‌‌ನಲ್ಲಿ ಪಂದ್ಯಗಳನ್ನು ವೀಕ್ಷಿಸಲು ಪ್ರತಿ ಪಂದ್ಯಕ್ಕೂ 19 ರೂ.ನಂತೆ ಬೆಲೆ ನಿಗದಿ ಮಾಡಲಾಗುತ್ತಿದೆ. ಆದರೆ ಜಿಯೋ ಸಿನೆಮಾದಲ್ಲಿ ಪಂದ್ಯಗಳನ್ನು ಉಚಿತವಾಗಿ ನೋಡಬಹುದಾಗಿದೆ. ಈ ಸಂಬಂಧ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಮೊರೆ ಹೋಗಿರುವ ಏರ್‌ಟೆಲ್, ಜಿಯೋಫೈಬರ್‌ ವಿರುದ್ಧ ಅನಾರೋಗ್ಯಕರ ದರ ಪೈಪೋಟಿಯ ದೂರು ನೀಡಿದ್ದು, ಒಂದು ಸೇವೆಗೆ ಒಂದೇ ದರದ ನಿಯಮ ತರಬೇಕೆಂದು ಕೋರಿದೆ.

https://twitter.com/JioCinema/status/1647132471983771648?ref_src=twsrc%5Etfw%7Ctwcamp%5Etweetembed%7Ctwterm%5E1647132471983771648%7Ctwgr%5E6caf6e916592a60fb175c62e7c73661722135485%7Ctwcon%5Es1_&ref_url=https%3A%2F%2Fwww.freepressjournal.in%2Fbusiness%2Freliance-jiocinema-wont-be-free-for-long-will-announce-prices-by-the-end-of-ipl

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read