ಮದುವೆಯ ನಂತರ ಸಣ್ಣಪುಟ್ಟ ವಿಷಯಕ್ಕೂ ಆಗಬಹುದು ಜಗಳ; ಸಂಬಂಧದಲ್ಲಿ ಮಾಧುರ್ಯ ಹೆಚ್ಚಿಸಲು ಹೀಗೆ ಮಾಡಿ

ಮದುವೆಗೂ ಮೊದಲು ಮತ್ತು ನಂತರದ ಜೀವನವು ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ತಿಳುವಳಿಕೆಯ ಕೊರತೆಯಿಂದ ಜಗಳಗಳೂ ನಡೆಯುತ್ತವೆ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ತುಂಬಾ ಗಟ್ಟಿಯಾಗಿರಬೇಕು. ಮದುವೆಯ ನಂತರ ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಆದರೆ ಕೆಲವೊಮ್ಮೆ ಸಂಬಂಧಗಳಲ್ಲಿ ಬಿರುಕು ಮತ್ತು ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತದೆ. ವೈವಾಹಿಕ ಜೀವನ

ದಂಪತಿಗಳ ಮಧ್ಯೆ ಕಲಹ ಸಹಜ. ಆದರೆ ಆದರೆ ಸಣ್ಣ ಪುಟ್ಟ ವಿಷಯಗಳಿಗೆ ಯಾವಾಗಲೂ ಜಗಳವಾಡುವುದು ಸಾಮಾನ್ಯ ಸಂಗತಿಯಲ್ಲ. ಕೆಲವೊಮ್ಮೆ ಜಗಳ ಎಷ್ಟರಮಟ್ಟಿಗೆ ಹೆಚ್ಚುತ್ತದೆ ಎಂದರೆ ಪರಸ್ಪರ ದೂರವಾಗುವ ಸಂದರ್ಭವೂ ಬರಬಹುದು. ಅಂತಹ ಸಂದರ್ಭಗಳಲ್ಲಿ ಪತಿ-ಪತ್ನಿ ಯಾವ ರೀತಿ ಪರಿಸ್ಥಿತಿ ನಿಭಾಯಿಸಬೇಕು ಎಂಬುದನ್ನು ನೋಡೋಣ.

ಶಾಂತವಾಗಿರಿ : ಸಣ್ಣಪುಟ್ಟ ಮಾತು ಅಥವಾ ಇನ್ನಾವುದೇ ವಿಷಯಕ್ಕೆ ಜಗಳ ಹೆಚ್ಚಾಗತೊಡಗಿದ್ದರೆ, ಜಗಳ ಮತ್ತಷ್ಟು ಉಲ್ಬಣಿಸದಂತೆ ಸ್ವಲ್ಪ ಹೊತ್ತು ಸುಮ್ಮನಿರಬೇಕು. ವಿಷಯ ಮುಂದುವರಿದರೆ ಪ್ರೀತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಂಬಂಧಗಳು ಮುರಿಯಬಹುದು. ಪ್ರತಿ ಕೆಲಸವನ್ನು ಶಾಂತ ಮನಸ್ಸಿನಿಂದ ಮಾಡುವುದರಿಂದ ಸಂಬಂಧಗಳನ್ನು ಸರಿಪಡಿಸಬಹುದು.

ತಪ್ಪುಸರಿ ವಾದ

ಜಗಳವಾದಾಗಲೆಲ್ಲಾ ಒಬ್ಬರಿಗೊಬ್ಬರು ಕಟುವಾದ ಮಾತುಗಳನ್ನಾಡುವುದು ಸಂಬಂಧದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಹಾಗಾಗಿ ವಾದ ಮಾಡುವ ಬದಲು ಮೆಲುವಾಗಿ ಮಾತನಾಡಿ. ತಪ್ಪು-ಸರಿ ಎಂಬ ಚರ್ಚೆಗಳು ಬೇಡ.

ಬುದ್ಧಿವಂತಿಕೆ

ಸಣ್ಣ ಸಮಸ್ಯೆ ಯಾವಾಗ ದೊಡ್ಡದಾಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಜಗಳದ ಸಂದರ್ಭದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಬೇಕು. ಪ್ರೀತಿಯಿಂದ ವಿವರಿಸಬೇಕೇ ಹೊರತು ಕೋಪದಿಂದಲ್ಲ.

ಸಂಬಂಧಗಳಲ್ಲಿ ಸಣ್ಣ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು. ಇದು ಸಂಬಂಧವನ್ನು ನೀರಸಗೊಳಿಸುತ್ತದೆ. ಆದ್ದರಿಂದ  ಸಂಗಾತಿಯೊಂದಿಗೆ ಮಾತನಾಡುವ ಮೂಲಕ ಮನಸ್ಸನ್ನು ಶಾಂತಗೊಳಿಸಬೇಕು. ಜಗಳದ ಬಳಿಕ ಮಾತನಾಡುವುದನ್ನು ನಿಲ್ಲಿಸಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read