ಕಲೆಕ್ಷನ್ ಕಡಿಮೆಯಾಗ್ತಿದ್ದಂತೆ ಪ್ರೇಕ್ಷಕರನ್ನು ಸೆಳೆಯಲು ಟಿಕೆಟ್ ದರ ಇಳಿಸಿದ ʼಆದಿಪುರುಷ್ʼ ಚಿತ್ರತಂಡ

ಭಾರೀ ಟೀಕೆಗೆ ಗುರಿಯಾಗಿರುವ ʼಆದಿಪುರುಷ್ʼ ಚಿತ್ರದ ಗಳಿಕೆ ದಿನೇ ದಿನೇ ಇಳಿಕೆಯಾಗ್ತಿದ್ದು, ಚಿತ್ರತಂಡ ಪ್ರೇಕ್ಷಕರನ್ನ ಸೆಳೆಯಲು ಟಿಕೆಟ್ ದರವನ್ನ ಕಡಿಮೆ ಮಾಡಿದೆ.

ಗುರುವಾರ ಮತ್ತು ಶುಕ್ರವಾರದ ಶೋಗಳಿಗೆ ಟಿಕೆಟ್ ದರವನ್ನು 150 ರೂ.ಗೆ ಇಳಿಸಲು ನಿರ್ಧರಿಸಿರುವುದಾಗಿ ʼಆದಿಪುರುಷ್ʼ ಚಿತ್ರತಂಡ ಪ್ರಕಟಿಸಿದೆ. ಚಿತ್ರದ ವಿರುದ್ಧ ಹೆಚ್ಚುತ್ತಿರುವ ಹಿನ್ನಡೆಯ ಮಧ್ಯೆ ʼಆದಿಪುರುಷ್ʼ ಬಾಕ್ಸ್ ಆಫೀಸ್ ಸಂಗ್ರಹವು ಸೋಮವಾರ ಮತ್ತು ಮಂಗಳವಾರ ಭಾರಿ ಕುಸಿತ ಕಂಡ ನಂತರ ಈ ನಿರ್ಧಾರ ಮಾಡಿದೆ. ಹಿಂದೂ ಮಹಾಕಾವ್ಯ ರಾಮಾಯಣ ಮತ್ತು ಚಿತ್ರದಲ್ಲಿನ ಪಾತ್ರಗಳನ್ನು ತಿರುಚಿದ ಆರೋಪದ ಮೇಲೆ ʼಆದಿಪುರುಷ್ʼ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ.

“ಜೂನ್ 22 ಮತ್ತು 23 ರಂದು ವಿಶೇಷ ಕೊಡುಗೆ. ಕೇವಲ 150 ರೂಪಾಯಿಗಳಿಗೆ 3D ಯಲ್ಲಿ ಭವ್ಯತೆಯನ್ನು ಅನುಭವಿಸಿ. ಈಗ ಪ್ರತಿಯೊಬ್ಬ ಭಾರತೀಯನು ಆದಿಪುರುಷನನ್ನು ವೀಕ್ಷಿಸುತ್ತಾನೆ. ಎಡಿಟ್ ಮಾಡಿದ ಮತ್ತು ಬದಲಾದ ಡೈಲಾಗ್‌ಗಳೊಂದಿಗೆ ಚಿತ್ರ ನೋಡಲು ಕುಟುಂಬಗಳನ್ನು ಆಹ್ವಾನಿಸಲಾಗಿದೆ” ಎಂದು ಇನ್‌ಸ್ಟಾಗ್ರಾಮ್‌ ನಲ್ಲಿ ಆದಿಪುರುಷ್ ಚಿತ್ರ ನಿರ್ಮಾಣದ ಬ್ಯಾನರ್ ಟಿ-ಸೀರೀಸ್ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read