ʼಆದಿಪುರುಷ್ʼ ಪ್ರದರ್ಶನ ವೇಳೆ 1 ಸೀಟ್ ಭಗವಾನ್ ಹನುಮಂತನಿಗೆ ಮೀಸಲು; ಚಿತ್ರತಂಡದ ಮನವಿಗೆ ಹೀಗಿತ್ತು ಸಿನಿಪ್ರಿಯರ ಪ್ರತಿಕ್ರಿಯೆ

ರೆಬೆಲ್ ಸ್ಟಾರ್ ಪ್ರಭಾಸ್ ಅವರ ಮುಂಬರುವ ಚಿತ್ರ ʼಆದಿಪುರುಷ್ʼ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಮಂಗಳವಾರ ಚಿತ್ರದ ಟ್ರೇಲರ್ ಬಿಡುಗಡೆ ಅದ್ಧೂರಿಯಾಗಿ ತಿರುಪತಿಯಲ್ಲಿ ನಡೆದಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಇದರ ನಡುವೆ ಚಿತ್ರ ಪ್ರದರ್ಶನ ವೇಳೆ ಥಿಯೇಟರ್ ಗಳಲ್ಲಿ ಒಂದು ಆಸನದ ಟಿಕೆಟ್ ಮಾರಾಟ ಮಾಡದೇ ಅದನ್ನು ಭಗವಂತ ಹನುಮನಿಗೆ ಮೀಸಲಿಡಬೇಕೆಂದು ಚಿತ್ರತಂಡ ವಿನಂತಿಸಿದೆ.

ಈ ಬಗ್ಗೆ ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಓಂ ರಾವುತ್ ಚಿತ್ರದ ವಿತರಕರಿಗೆ ಪ್ರತಿ ಥಿಯೇಟರ್‌ನಲ್ಲಿ ಒಂದು ಆಸನವನ್ನು ಭಗವಾನ್ ಹನುಮಂತನಿಗೆ ಅರ್ಪಿಸುವಂತೆ ವಿನಂತಿಸಿದರು.

ಈ ವಿಷಯವಾಗಿ ಒಂದು ವರ್ಗದ ಸಿನಿಪ್ರಿಯರು ಚಿತ್ರತಂಡವನ್ನು ಟ್ರೋಲ್ ಮಾಡುತ್ತಿದ್ದಾರೆ. ಇದು ಪ್ರಚಾರದ ಸ್ಟಂಟ್ ಎಂದು ಕರೆದಿದ್ದಾರೆ. ಚಿತ್ರ ಪ್ರದರ್ಶಕರು ಹನುಮಂತನಿಗೆ ಒಂದು ಆಸನವನ್ನು ಮೀಸಲಿಡಲು ಸಾಧ್ಯವೇ? ಮೊದಲನೇ ದಿನದಿಂದಲೇ ಹೀಗೆ ಮಾಡುತ್ತಾರೋ ನೋಡಬೇಕು ಎಂದಿದ್ದಾರೆ.

ಪ್ರಭಾಸ್ ಜೊತೆಗೆ, ಕೃತಿ ಸನೋನ್, ಸನ್ನಿ ಸಿಂಗ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಜೂನ್ 16 ರಂದು ದೊಡ್ಡ ಪರದೆಯ ಮೇಲೆ ಬರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read