ಜಿ20 ಸದಸ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಆಫ್ರಿಕನ್ ಒಕ್ಕೂಟ ಸೇರ್ಪಡೆಯಾಗಿದೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.
ಜಿ20 ಶೃಂಗಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಜಿ20 ಒಕ್ಕೂಟಕ್ಕೆ ಆಫ್ರಿಕನ್ ಒಕ್ಕೂಟ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದರು. ಆ ಮೂಲಕ ಜಿ20 ಒಕ್ಕೂಟದ 21ನೇ ದೇಶವಾಗಿ ಆಫ್ರಿಕನ್ ಒಕ್ಕೂಟ ಸೇರ್ಪಡೆಯಾದಂತಾಗಿದೆ.
ನವದೆಹಲಿಯಲ್ಲಿ ಆಯೋಜನೆಗೊಂಡಿರುವ ಐತಿಹಾಸಿಕ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಹಲವು ದಿಗ್ಗಜ ನಾಯಕರು ಆಗಮಿಸಿದ್ದು, ಜಿ 20 ಯಲ್ಲಿ ವಿಶ್ವದ ದಿಗ್ಗಜ ನಾಯಕರ ಸಮಾಗಮ ಆಗಿದೆ. ನವದೆಹಲಿಯಲ್ಲಿ 2 ದಿನ ‘G20 ಶೃಂಗಸಭೆ’ ಆರಂಭವಾಗಿದ್ದು , ಭಾರತ್ ಮಂಟಪಕ್ಕೆ ಆಗಮಿಸಿದ ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ ( Narendra Modi) ಸ್ವಾಗತ ಕೋರಿದ್ದಾರೆ.
#WATCH | G 20 in India: Egyptian President Abdel Fattah El–Sisi and Prime Minister of Mauritius Pravind Kumar Jugnauth arrive at Bharat Mandapam, the venue for G 20 Summit in Delhi's Pragati Maidan. pic.twitter.com/abttSex13Y
— ANI (@ANI) September 9, 2023