ದುಃಖದ ಸನ್ನಿವೇಶದಲ್ಲಿ ಅಳಲು ಅಮೃತಾಂಜನ್‌ ಹಚ್ಚಿಸಿಕೊಂಡಿದ್ದರಂತೆ ಈ ನಟಿ….!

ತಮಿಳು ನಟಿ ಸುಲಕ್ಷಣಾ ಇತ್ತೀಚಿನ ಸಂದರ್ಶನವೊಂದರಲ್ಲಿ ನವರಸ ನಾಯಕ ಕಾರ್ತಿಕ್ ಅವರ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿಯಾಗಿದ್ದಾಗ ತನಗೆ ಸಿಕ್ಕ ಅನುಭವಗಳು ಮತ್ತು ನೆನಪುಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹಾಗು ನಟ ಕಾರ್ತಿಕ್ ನಡುವೆ ಇದ್ದಂತಹ ಆತ್ಮೀಯತೆಯನ್ನ ಹೇಳಿಕೊಂಡಿದ್ದಾರೆ.

ಕಾರ್ತಿಕ್ ತನ್ನನ್ನು ಮಹಿಳೆಯಾಗಿ ಎಂದಿಗೂ ಗೌರವಿಸಲಿಲ್ಲ ಎಂದಿರುವ ಅವರು ತಮ್ಮನ್ನು ಹೇಗೆಲ್ಲಾ ಚುಡಾಯಿಸುತ್ತಿದ್ದರು ಎಂಬುದನ್ನ ತಿಳಿಸಿದ್ದಾರೆ.

ನಟ ಕಾರ್ತಿಕ್ ಶೂಟಿಂಗ್ ಸ್ಪಾಟ್‌ನಲ್ಲಿ ಸದಾ ಲವಲವಿಕೆಯಿಂದ ಎಲ್ಲರೊಂದಿಗೆ ಮಾತನಾಡುತ್ತಾ ಇರುತ್ತಿದ್ದರು. ನನ್ನೊಂದಿಗೂ ಸದಾ ತಮಾಷೆ ಮಾಡುತ್ತಿದ್ದ ಅವರು ನನ್ನನ್ನು ಯಾವತ್ತೂ ಹೆಣ್ಣೆಂದು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.

‘ನಿನ್ನನ್ನು ನಾನು ಯಾವತ್ತೂ ನನ್ನ ಬಾಯ್ ಫ್ರೆಂಡ್ ಆಗಿ ನೋಡುತ್ತೇನೆ, ಯಾವ ಕ್ಷಣದಲ್ಲೂ ಹುಡುಗಿಯಾಗಿ ನೋಡುವುದಿಲ್ಲ’ ಎಂದು ಕಾರ್ತಿಕ್ ಅವರು ಹೇಳುತ್ತಿದ್ದ ಮಾತನ್ನ ಸುಲಕ್ಷಣ ಸ್ಮರಿಸಿದ್ದಾರೆ.

ಅದೇ ರೀತಿ ಸುಲಕ್ಷಣಾ ಅವರ ನಟನೆಯನ್ನು ನೋಡಿದ ಕಾರ್ತಿಕ್ ‘ನಿಮಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟವರು ಯಾರು?’ ಹೈ ಹೀಲ್ಸ್ ಹಾಕಿಕೊಂಡು ಹೇಗೆ ನಟಿಸಬೇಕು ಎಂಬುದೂ ಗೊತ್ತೇ ಇಲ್ಲ’ ಎಂದು ಗೇಲಿ ಮಾಡುತ್ತಿದ್ದರಂತೆ .

ಗ್ಲಿಸರಿನ್ ಹಚ್ಚಿ ಅಳುವುದು ನನಗೆ ನೈಜವಾಗಿರುವುದಿಲ್ಲ ಎಂದು ಭಾವಿಸುತ್ತಿದ್ದೆ. ಆದ್ದರಿಂದ ಕಾರ್ತಿಕ್ ನನ್ನ ಕಣ್ಣಿಗೆ ಅಮೃತಾಂಜನ್ ಹಚ್ಚಿ ಅಳುವಂತೆ ಮಾಡುತ್ತಿದ್ದರು. ಶೂಟಿಂಗ್ ಸ್ಪಾಟ್‌ನಲ್ಲಿ ಅವರು ಪದೇ ಪದೇ ಚುಡಾಯಿಸುತ್ತಿದ್ದರೂ ನನಗೆ ಕಾರ್ತಿಕ್‌ ಮೇಲೆ ಕೋಪ ಬರುತ್ತಿರಲಿಲ್ಲ. ನಾನು ಕಾರ್ತಿಕ್ ಸರ್ ಗೆ ತುಂಬಾ ಹತ್ತಿರವಾಗಿದ್ದೇನೆ. ಅವರು ನನ್ನ ಸಹೋದರನಿದ್ದಂತೆ ಎಂದು ಸುಲಕ್ಷಣ ಹೇಳಿದ್ದಾರೆ.

90 ರ ದಶಕದಲ್ಲಿ ತಮಿಳು ಚಿತ್ರರಂಗದ ಟಾಪ್ ನಟಿಯರಲ್ಲಿ ಸುಲಕ್ಷಣಾ ಒಬ್ಬರು. ತುಲಾಬರಂ ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದ ಸುಲಕ್ಷಣಾ ನಂತರ ತೋರಲ್ ನಿನ್ನ ಪೋಚು ಚಿತ್ರದ ಮೂಲಕ ನಟಿಯಾಗಿ 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಇಬ್ಬರೊಂದಿಗೆ ಜೋಡಿಯಾಗಿರುವ ಕೆಲವೇ ಕೆಲವು ನಟಿಯರಲ್ಲಿ ಅವರು ಒಬ್ಬರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read