ಕಾಣೆಯಾದ ಬೀದಿ ನಾಯಿ ಕುರಿತು ಪೋಸ್ಟ್‌ ಹಾಕಿದ ನಟಿ ಸುಧಾರಾಣಿ

ಬೆಂಗಳೂರು: ನಟಿ ಸುಧಾರಾಣಿ ಅನೇಕ ಸಿನಿಮಾಗಳ ಮೂಲಕ ಚಿರಪರಿಚಿತರಾಗಿದ್ದಾರೆ. ಇತ್ತೀಚೆಗೆ ಈ ನಟಿ ಸೀರಿಯಲ್ ಮೂಲಕ ಮನೆ ಮಾತಾಗುತ್ತಿದ್ದಾರೆ. ಮನೋಜ್ಞ ನಟನೆಯ ಮೂಲಕವೇ ಜನ ಮನ ಗೆದ್ದ ಈ ನಟಿ, ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಇದೀಗ ಅವರು ನಾಯಿ ವಿಚಾರವಾಗಿ ಸುದ್ದಿಯಾಗಿದ್ದಾರೆ.

ಹೌದು, ಈ ನಟಿ ಇರುವ ಮನೆಯ ಬೀದಿಯ ನಾಯಿ ಕಾಣೆಯಾಗಿದೆಯಂತೆ. ಸುಮಾರು 15 ದಿನಗಳಿಂದ ಗಂಗಮ್ಮ ಎಂಬ ನಾಯಿ ಕಾಣೆಯಾಗಿದೆ. ಈ ವಿಚಾರವಾಗಿ ನಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಏರಿಯಾ ನಾಯಿ ಕಾಣೆಯಾಗಿದೆ. ಎಲ್ಲೇ ಕಂಡರು ನನಗೆ ಪೋಸ್ಟ್ ಮಾಡಿ. ಗಂಗಮ್ಮನನ್ನು ನಾವು ತುಂಬಾ ಮಿಸ್ ಮಾಡಿಕೊಳ್ತಾ ಇದ್ದೇವೆ ಎಂದು ಹೇಳಿದ್ದಾರೆ. ಇನ್ನು ಬಿಬಿಎಂಪಿ ವಿರುದ್ಧವೂ ಕಿಡಿ ಕಾರಿದ್ದಾರೆ ಈ ನಟಿ.

ಬಿಬಿಎಂಪಿ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಆದರೂ ಅವರು ತಲೆಕೆಡಿಸಿಕೊಂಡಿಲ್ಲ. ಕೂಡಲೇ ಈ ನಾಯಿ ಸಿಕ್ಕರೆ ದಯವಿಟ್ಟು ತಿಳಿಸಿ ಎಂದು ಹೇಳಿದ್ದಾರೆ. ಇನ್ನು ಈ ಗಂಗಮ್ಮ ಇಂಡಿ ಜಾತಿ ಶ್ವಾನವಾಗಿದ್ದು ಕಪ್ಪು- ಬಿಳಿ ಬಣ್ಣದಲ್ಲಿದೆಯಂತೆ. ಸುಧಾರಾಣಿ ಮನೆಯಲ್ಲಿ ಈಗಾಗಲೇ ಎರಡು ಸಾಕು ನಾಯಿಗಳು ಇವೆ. ಆ ಎರಡು ಶ್ವಾನಗಳಿಗೆ ಮಿಕ್ಕಿ ಅಂಡ್ ಮಿನಿ ಎಂದು ಹೆಸರಿಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read