ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಸಕ್ರಿಯರಾಗಿರುವ ನಟಿ ಸ್ಪಂದನ ಸೋಮಣ್ಣ ಫೋಟೋಶೂಟ್ ನಲ್ಲೂ ಸಾಕಷ್ಟು ಬಿಜಿಯಾಗಿರುತ್ತಾರೆ. ಸ್ಪಂದನ ಸೋಮಣ್ಣ ಇತ್ತೀಚಿಗಷ್ಟೇ ಫೋಟೋಗೆ ಪೋಸ್ ನೀಡಿದ್ದು, ತಮ್ಮ ಫೋಟೋಗಳನ್ನು ಒಂದೊಂದಾಗಿ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
‘ನಾನು ನನ್ನ ಕನಸು’ ಎಂಬ ಧಾರವಾಹಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸ್ಪಂದನ ಸೋಮಣ್ಣ ಬಳಿಕ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದು, ಇತ್ತೀಚಿಗೆ ಪ್ರಮೋದ್ ಜಯ ನಿರ್ದೇಶನದ ‘ದಿಲ್ ಖುಷ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕರಿಮಣಿ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ