BIG NEWS : ‘ಪ್ರೇಮಾನಂದ ಮಹಾರಾಜ್’ಗೆ  ಕಿಡ್ನಿ ನೀಡಲು ಮುಂದಾಗಿದ್ದ ನಟಿ ಶಿಲ್ಪಾ ಶೆಟ್ಟಿ ಪತಿ ‘ರಾಜ್ ಕುಂದ್ರಾ’ |WATCH VIDEO

ರಾಜ್ ಕುಂದ್ರಾ ಮತ್ತು ಅವರ ಪತ್ನಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ವೃಂದಾವನದಲ್ಲಿ ಪೂಜ್ಯ ಆಧ್ಯಾತ್ಮಿಕ ನಾಯಕ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾಗಲು ಬಂದಿದ್ದರು.

ಉದ್ಯಮಿಯೊಬ್ಬರಿಗೆ 60 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪದ ವರದಿಗಳಲ್ಲಿ ಕುಂದ್ರಾ ಅವರ ಹೆಸರು ಬಂದ ಸಮಯದಲ್ಲಿಯೂ ಅವರು ಆಶ್ರಮದಲ್ಲಿ ಕಾಣಿಸಿಕೊಂಡರು. ಮಹಾರಾಜ್ ಅವರೊಂದಿಗಿನ ಭೇಟಿಯ ಸಮಯದಲ್ಲಿ, ಶಿಲ್ಪಾ ಮತ್ತು ರಾಜ್ ಇಬ್ಬರೂ ಆಶೀರ್ವಾದ ಪಡೆದರು ಮತ್ತು ಅವರ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಆಲಿಸಿದರು.

ಪ್ರೇಮಾನಂದ ಮಹಾರಾಜ್ ಗೆ ಆರೋಗ್ಯ ಸಮಸ್ಯೆ ಉಂಟಾದ ಹಿನ್ನೆಲೆ ಕಿಡ್ನಿ ವೈಫಲ್ಯ ಹಿನ್ನೆಲೆಯಲ್ಲಿ ರಾಜ್ ಕುಂದ್ರಾ ತಮ್ಮ ಒಂದು ಕಿಡ್ನಿ ನೀಡಲು ಮುಂದಾಗಿದ್ದರಂತೆ. ಇದನ್ನು ಕೇಳಿ ಶಿಲ್ಪಾ ಶೆಟ್ಟಿ ಕೂಡ ಅಚ್ಚರಿಗೊಂಡಿದ್ದಂತೆ.

ನನ್ನ ಎರಡು ಕಿಡ್ನಿಗಳು ವಿಫಲಗೊಂಡಿದೆ. ಕಳೆದ 10 ವರ್ಷಗಳಿಂದ ಈ ಸ್ಥಿತಿಯೊಂದಿಗೆ ಬದುಕುತ್ತಿದ್ದೇನೆ ಎಂದು ಪ್ರೇಮಾನಂದ ಮಹಾರಾಜ್ ಹೇಳಿ್ದಾರೆ. ದೇವರ ಕರೆ ಯಾವುದೇ ಕ್ಷಣದಲ್ಲಿ ಬರಬಹುದು, ಆದರೆ ಅದಕ್ಕೆ ನಾನು ಭಯಪಡುವುದಿಲ್ಲ ಎಂದಿದ್ದಾರೆ.

ಪ್ರೇಮಾನಂದವರ ಮಾತು ಕೇಳಿದ ರಾಜ್ ಕುಂದ್ರಾ ‘’ ನಾನು ನಿಮ್ಮನ್ನು ಕಳೆದ 2 ವರ್ಷಗಳಿಂದ ಅನುಸರಿಸುತ್ತಿದ್ದೇನೆ. ನಾನು ಸಹಾಯ ಮಾಡಲು ಸಾಧ್ಯವಾದರೆ ನನ್ನ ಒಂದು ಕಿಡ್ನಿಯನ್ನು ನಿಮಗೆ ನೀಡುತ್ತೇನೆ ಎಂದು ಅವರು ಭಾವುಕರಾಗಿ ಹೇಳಿದ್ದಾರಂತೆ.

ಈ ಅನಿರೀಕ್ಷಿತ ಹೇಳಿಕೆ ಶಿಲ್ಪಾ ಶೆಟ್ಟಿಯವರನ್ನು ಅಚ್ಚರಿಗೊಳಿಸಿದೆ ಎಂದು ವರದಿಯಾಗಿದೆ, ಆದರೆ ಪ್ರೇಮಾನಂದ ಮಹಾರಾಜ್ ಕೃತಜ್ಞತೆಯಿಂದ ಪ್ರತಿಕ್ರಿಯಿಸಿದರು., “ನೀವು ಸಂತೋಷವಾಗಿರುವುದು ನನಗೆ ಸಾಕು. ಕರೆ ಬರುವವರೆಗೂ, ನಾವು ಕಿಡ್ನಿ ಕಾರಣದಿಂದಾಗಿ ಈ ಜಗತ್ತನ್ನು ಬಿಡುವುದಿಲ್ಲ. ಎಂದು ಹೇಳಿದರು.

View this post on Instagram

A post shared by Bhajan Marg Official (@bhajanmarg_official)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read