ನಟಿ ರಶ್ಮಿಕಾ ಮಂದಣ್ಣಗೆ ಡೀಫ್ ಫೇಕ್ ಸಂಕಷ್ಟ ಎದುರಾಗಿದೆ. ನಟಿಯ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದು, ಈ ಹಿನ್ನೆಲೆ ನಟಿ ರಶ್ಮಿಕಾ ಮಂದಣ್ಣ ತೀವ್ರ ಆಕ್ರೋಶ ವ್ಯಕ್ಯಪಡಿಸಿದ್ದಾರೆ.
ನಾವು ಒಳ್ಳೆಯ ದೇಶದಲ್ಲಿ ಇದ್ದೇವೆ. ಯಾರೂ ಇಂತಹ ಕೆಲಸ ಮಾಡಬಾರದು. ಇಂತಹ ಕೃತ್ಯ ಎಸಗುವ ದುರುಳರ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಡೀಪ್ಫೇಕ್ ವಿರುದ್ಧ ಎಲ್ಲರೂ ಧ್ವನಿ ಎತ್ತುವಂತೆ ಕರೆ ನೀಡಿದ್ದಾರೆ.
ನಟಿ ‘ರಶ್ಮಿಕಾ ಮಂದಣ್ಣ’ ಅವರದ್ದು ಎನ್ನಲಾದ ಮತ್ತೊಂದು ಡೀಫ್ ಫೇಕ್ ವಿಡಿಯೋ ವೈರಲ್ ಆಗಿದೆ. ಬ್ಲಾಕ್ ಔಟ್ ಫಿಟ್ನಲ್ಲಿ ರಶ್ಮಿಕಾ ಡ್ಯಾನ್ಸ್ ಮಾಡೋ ರೀತಿ ಫೇಕ್ ಮಾಡಿ ವೈರಲ್ ಮಾಡಲಾಗಿದೆ. ಈ ಮೊದಲು ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೀಡಿಯೊ ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ರಶ್ಮಿಕಾ ಕಪ್ಪು ಯೋಗ ಸೂಟ್ ಧರಿಸಿ ಎಲಿವೇಟರ್ಗೆ ಪ್ರವೇಶಿಸಿ ಕ್ಯಾಮೆರಾಗೆ ನಗುತ್ತಿರುವುದನ್ನು ತೋರಿಸಿತ್ತು. ವಿಶೇಷವೆಂದರೆ, ಮೂಲ ವೀಡಿಯೊದಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿ ಜಾರಾ ಪಟೇಲ್ ಕಾಣಿಸಿಕೊಂಡಿದ್ದಾರೆ, ಅವರ ಮುಖವನ್ನು ರಶ್ಮಿಕಾ ಮಂದಣ್ಣ ಅವರ ಮುಖವಾಗಿ ಮಾರ್ಫಿಂಗ್ ಮಾಡಲಾಗಿತ್ತು.
https://twitter.com/SalmanK53465481/status/1725497696646234209?ref_src=twsrc%5Etfw%7Ctwcamp%5Etweetembed%7Ctwterm%5E1725497696646234209%7Ctwgr%5Edba3416f892377c62672ee4dd57b64f922fe885a%7Ctwcon%5Es1_&ref_url=https%3A%2F%2Fkannadadunia.com%2Flive-news%2Fbig-news-actress-rashmika-mandanna-another-deep-fake-video-viral-deep-fake-video%2F