ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ಮಾಳವಿಕಾ ನಾಯರ್

ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನಟಿ ಮಾಳವಿಕಾ ನಾಯರ್ ಇಂದು ತಮ್ಮ 30ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

2012ರಲ್ಲಿ ತೆರೆಕಂಡ ‘ಉಸ್ತಾದ್ ಹೋಟೆಲ್’ ಎಂಬ ಮಲಯಾಳಂ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ಬಳಿಕ ‘ಕರ್ಮ ಯೋಧ’  ‘ಪುತಿಯ ತೀರಂಗಲ್’ ‘ಬ್ಲ್ಯಾಕ್ ಬಟರ್ಫ್ಲೈ’ ‘ಪಕೀಡ’ ‘ಯೇವಡೆ ಸುಬ್ರಮಣ್ಯಂ’ ಸೇರಿದಂತೆ  ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು.

ಮಾಳವಿಕಾ ನಾಯರ್ ಪೋಷಕ ಪಾತ್ರಗಳಲ್ಲಿ ಹಾಗೂ ನಾಯಕ ನಟಿಯಾಗಿ ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಕಳೆದ ವರ್ಷ ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಕಲ್ಕಿ 2898 ad’ ಚಿತ್ರದಲ್ಲಿ ಅಭಿಮನ್ಯುವಿನ ಪತ್ನಿ ಉತ್ತರೆಯಾಗಿ  ಕಾಣಿಸಿಕೊಂಡಿದ್ದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ಕೃಷ್ಣಂ ಪ್ರಣಯ ಸಖಿ’ ಯಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು. ಇತ್ತೀಚಿಗೆ ‘ಶರ್ವಾ36’ ಎಂಬ ತೆಲುಗು ಸಿನಿಮಾ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read