ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನಟಿ ಕಾವ್ಯ ತಾಪರ್ ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
2018ರಲ್ಲಿ ತೆರೆ ಕಂಡ ‘ಈ ಮಾಯಾ ಪೆರೆಮಿತೋ’ ಎಂಬ ತೆಲುಗು ಚಿತ್ರದಲ್ಲಿ ಶೀತನ್ ಜೈನ್ ಪಾತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು 2019 ರಂದು ತಮಿಳಿನ ‘ಮಾರ್ಕೆಟ್ ರಾಜ ಎಂಬಿಬಿಎಸ್’ ನಲ್ಲಿ ತೆರೆ ಹಂಚಿಕೊಂಡರು. ಬಳಿಕ ‘ಏಕ್ ಮಿನಿ ಕಥಾ’ ‘ಮಿಡಲ್ ಕ್ಲಾಸ್ ಲವ್’ ‘ಈಗಲ್’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು.
ರಾಮ್ ಪೋತಿನೇನಿ, ಸಂಜಯ್ ದತ್, ಹಾಗೂ ಕಾವ್ಯ ತಾಪರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಪ್ಯಾನ್ ಇಂಡಿಯಾ ಚಿತ್ರ ‘ಡಬಲ್ iSmart’ ಇತ್ತೀಚಿಗಷ್ಟೇ ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ, ಇದರ ಬೆನ್ನಲ್ಲೇ ನಟಿ ಕಾವ್ಯ ತಾಪರ್ ‘ವಿಶ್ವಂ’ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ.