ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ದೀಪಿಕಾ ಪಡುಕೋಣೆ – ರಣವೀರ್ ಸಿಂಗ್ : ವರದಿ

ನವದೆಹಲಿ : ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ ಎಂದು ಇತ್ತೀಚಿನ ವರದಿ ತಿಳಿಸಿದೆ. ಮದುವೆಯಾಗಿ ಐದು ವರ್ಷಗಳಾಗಿರುವ ದಂಪತಿಗಳು ಗರ್ಭಧಾರಣೆಯ ಊಹಾಪೋಹಗಳನ್ನು ಇನ್ನೂ ದೃಢಪಡಿಸಿಲ್ಲ.

ದೀಪಿಕಾ ಪಡುಕೋಣೆ ಗರ್ಭಿಣಿಯೇ?

ದೀಪಿಕಾ ಪಡುಕೋಣೆ ಗರ್ಭಿಣಿ ಎಂದು ಮೂಲಗಳು ಬಹಿರಂಗಪಡಿಸಿದೆ. ವದಂತಿಗಳ ಹೊರತಾಗಿಯೂ, ದೀಪಿಕಾ ಅಥವಾ ರಣವೀರ್ ಈ ಸುದ್ದಿಯನ್ನು ಸಾರ್ವಜನಿಕವಾಗಿ ಉಲ್ಲೇಖಿಸಿಲ್ಲ. ಸುದ್ದಿಯ ಸತ್ಯಾಸತ್ಯತೆ ಇನ್ನೂ ಗೊತ್ತಿಲ್ಲ. ಆದರೆ ವಿಷಯ ತಿಳಿದ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ದೀಪಿಕಾ ಪಡುಕೋಣೆ ಕೆಲವು ವಿವಾದಗಳಿಗೂ ಈಡಾಗಿದ್ದರು. ಫೈಟರ್ ಸಿನಿಮಾದಲ್ಲಿ ವಾಯುಪಡೆಯ ಸಮವಸ್ತ್ರವನ್ನು ಧರಿಸಿ ಲಿಪ್ಕಿಸ್ ಮಾಡುತ್ತಿರುವುದು ವಾಯುಪಡೆಗೆ ಅವಮಾನ ಮಾಡಿದೆ. ಜೊತೆಗೆ ವಾಯುಪಡೆಯ ಘನತೆಗೆ ಧಕ್ಕೆ ತಂದಿದೆ. ಪಡೆಯ ಅಸಂಖ್ಯಾತ ಅಧಿಕಾರಿಗಳಿಗೆ ಅವಮಾನವಾಗಿದೆ’ ಎಂದು ಲೀಗಲ್ ನೋಟಿಸ್ ಕೂಡ ನೀಡಲಾಗಿತ್ತು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read