ತಮಿಳು ನಟ ವಿಶಾಲ್ ಆಗಸ್ಟ್ 29 ರ ಶುಕ್ರವಾರದಂದು ನಟಿ ಸಾಯಿ ಧನ್ಶಿಕಾ ಅವರೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ.48 ನೇ ಹುಟ್ಟುಹಬ್ಬದ ದಿನವೇ ನಟಿ ‘ಸಾಯಿ ಧನ್ಶಿಕಾ’ ಜೊತೆ ವಿಶಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ತಮಿಳು ನಟ ವಿಶಾಲ್ ಸಾಯಿ ಧನ್ಶಿಕಾ ಅವರೊಂದಿಗೆ ನಿಶ್ಚಿತಾರ್ಥವನ್ನು ಘೋಷಿಸಿದ್ದಾರೆ. ಜಂಟಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಮ್ಮ ಆತ್ಮೀಯ ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ಹಂಚಿಕೊಂಡ ವಿಶಾಲ್, “ನನ್ನ ವಿಶೇಷ ಹುಟ್ಟುಹಬ್ಬದಂದು ನನಗೆ ಶುಭ ಹಾರೈಸಿ ಆಶೀರ್ವದಿಸಿದ್ದಕ್ಕಾಗಿ ಈ ವಿಶ್ವದ ಮೂಲೆ ಮೂಲೆಯ ನಿಮ್ಮೆಲ್ಲರಿಗೂ ಧನ್ಯವಾದಗಳು” ಎಂದು ಬರೆದಿದ್ದಾರೆ.ಅವರ ಮದುವೆ ಶೀಘ್ರದಲ್ಲೇ ನಡೆಯುವ ನಿರೀಕ್ಷೆಯಿದೆ.
ಧನ್ಶಿಕಾ ತಮಿಳು, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮಿಳು ಚಿತ್ರ ತಿರುಡಿ (2006) ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ ಅವರು ಪೆರಣ್ಮೈ (2009), ಅರಾವಣ್ (2012), ಪರದೇಸಿ (2013) ಮತ್ತು ಕಬಾಲಿ (2016) ಚಿತ್ರಗಳಲ್ಲಿ ಕಾಣಿಸಿಕೊಂಡರು.
Tamil actors #Vishal & #SaiDhanshika confirmed their relationship & announced their wedding date as August 29, during the trailer launch event for Sai's film #Yogida on May 19. pic.twitter.com/QqaERrSU76
— OTTRelease (@ott_release) May 19, 2025