ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಸಿನಿಮಾ ಬಹಳ ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರಕ್ಕೆ ನಟ ‘ರಾಜ್ ಬಿ ಶೆಟ್ಟಿ’ ಸಾಥ್ ನೀಡಿದ್ದು, ಸದ್ಯ ಕರಾವಳಿ ಚಿತ್ರದ ಟೀಸರ್ ರಿಲೀಸ್ ಆಗಿದೆ.
ಕಂಬಳದ ಸುತ್ತ ನಡೆಯುವ ಕಥೆಯೇ ಈ ಕರಾವಳಿ . ಚಿತ್ರದಲ್ಲಿ ನಟ ರಾಜ್ ಬಿ ಶೆಟ್ಟಿ ಪಾತ್ರ ಏನೆಂಬುದು ಇನ್ನೂ ರಿವೀಲ್ ಆಗಿಲ್ಲ. 2 ಕೋಣಗಳ ನಡುವೆ ದಿಟ್ಟಿಸಿ ನಿಂತ ರಾಜ್ ಬಿ ಶೆಟ್ಟಿ ಪಂಜು ಹಿಡಿದು ಡಿಫರೆಂಟ್ ಆಗಿ ಫೋಸ್ ನೀಡಿದ್ದಾರೆ. ಎಕ್ಕ ಚಿತ್ರದ ನಾಯಕಿ ಸಂಪದಾ ಈ ಚಿತ್ರದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.
ಈಗಾಗಲೇ ‘ಸು ಫ್ರಮ್ ಸೋ’ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಾಜ್ ಬಿ ಶೆಟ್ಟಿ ನಿರ್ಮಾಣದ ಸಿನಿಮಾ ಸು ಫ್ರಮ್ ಸೋ ದಿನದಿಂದ ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ವಿದೇಶದಲ್ಲೂ ರಿಲೀಸ್ ಆಗಲು ಸಿದ್ದತೆ ನಡೆಸುತ್ತಿದೆ. ಕರಾವಳಿ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಸಾಥ್ ನೀಡಿದ್ದು, ಸಿನಿಮಾದ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
RAJ B SHETTY: KANNADA FILM 'KARAVALI' NEW TEASER OUT NOW… Writer-director #GurudathaGaniga unveils the new teaser of #Kannada film #Karavali, featuring #RajBShetty as #Maveera.
— taran adarsh (@taran_adarsh) August 7, 2025
🔗: https://t.co/odbMec40SE
A #KVN presentation, #Karavali features #PrajwalDevaraj with #Sampaada,… pic.twitter.com/X1Y9ZhgeJs