ಶಾರುಖ್ ಜೊತೆ ‌ʼಓಂ ಶಾಂತಿ ಓಂʼ ನಲ್ಲಿ ನಟಿಸಿದ್ದ ನಟ ನಿತೇಶ್ ಪಾಂಡೆ ವಿಧಿವಶ

ಬಾಲಿವುಡ್ ನಟ ಮತ್ತು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ನಿತೇಶ್ ಪಾಂಡೆ ಮಹಾರಾಷ್ಟ್ರದ ನಾಸಿಕ್ ಬಳಿಯ ಇಗತ್‌ಪುರಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು.

ಇಗತ್‌ಪುರಿಯಲ್ಲಿ ಶೂಟಿಂಗ್‌ನಲ್ಲಿದ್ದ ನಿತೇಶ್ ಪಾಂಡೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆನ್ನಲಾಗಿದೆ. ಪೊಲೀಸರು ಹೋಟೆಲ್‌ನಲ್ಲಿ ಪರಿಶೀಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಹೋಟೆಲ್ ಸಿಬ್ಬಂದಿ ಹಾಗೂ ನಿತೇಶ್ ಪಾಂಡೆ ಆಪ್ತರನ್ನು ವಿಚಾರಣೆ ನಡೆಸಲಾಗುತ್ತಿದೆ. ನಿತೇಶ್ ಪಾಂಡೆ ಅವರು ಶಾರುಖ್ ಖಾನ್ ನಟಿಸಿದ ʼಓಂ ಶಾಂತಿ ಓಂʼ ಚಿತ್ರದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು.

ನಿತೇಶ್ ಪಾಂಡೆ ಅವರ ಸೋದರ ಸಂಬಂಧಿ ಸಿದ್ಧಾರ್ಥ್ ನಗರ್, ನಿತೇಶ್ ಪಾಂಡೆಯವರ ಸಾವನ್ನ ದೃಢಪಡಿಸಿದ್ದು, ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರಲಿಲ್ಲ ಎಂದಿದ್ದಾರೆ.

ನಿತೇಶ್ ಪಾಂಡೆ ಟಿವಿ ಮತ್ತು ಸಿನಿಮಾಗಳಲ್ಲಿ ಪರಿಚಿತ ಮುಖವಾಗಿದ್ದರು. ಅವರು 90 ರ ದಶಕದಲ್ಲಿ ರಂಗಭೂಮಿ ಕಲಾವಿದರಾಗಿ ನಟನೆ ಶುರುಮಾಡಿದರು. ನಂತರ ತೇಜಸ್ ಎಂಬ ಅಲ್ಪಾವಧಿಯ ಟಿವಿ ಶೋನಲ್ಲಿ ಪತ್ತೇದಾರಿ ಪಾತ್ರವನ್ನು ನಿರ್ವಹಿಸಿದರು.

ನಿತೇಶ್ ಪಾಂಡೆ ಅಸ್ತಿತ್ವ, ಏಕ್ ಪ್ರೇಮ್ ಕಹಾನಿ, ಮಂಜಿಲಿನ್ ಅಪನಿ ಅಪನಿ, ಸಾಯಾ, ದುರ್ಗೇಶ್ ನಂದಿನಿ ಮತ್ತು ಜುಸ್ತಜೂ ಮುಂತಾದ ಟಿವಿ ಶೋಗಳಲ್ಲಿ ಕಾಣಿಸಿಕೊಂಡರು. ಅವರು ಇತ್ತೀಚೆಗೆ ಅನುಪಮಾ ಧಾರಾವಾಹಿಯಲ್ಲಿದ್ದರು.

ನಿತೇಶ್ ಪಾಂಡೆ ಅಭಿನಯಿಸಿರುವ ಸಿನಿಮಾಗಳೆಂದರೆ ಬದಾಯಿ ದೋ, ಶಾದಿ ಕೆ ಸೈಡ್ ಎಫೆಕ್ಟ್ಸ್ ಮತ್ತು ರಂಗೂನ್ ಸೇರಿವೆ. ಶಾರುಖ್ ಖಾನ್ ಅವರ ಓಂ ಶಾಂತಿ ಓಂ ಸೇರಿ ಖೋಸ್ಲಾ ಕಾ ಘೋಸ್ಲಾದಲ್ಲೂ ಕಾಣಿಸಿಕೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read