ಪದವಿ ಘನತೆ ಮರೆತ, ಜನರನ್ನು ಮೂರ್ಖರೆಂದೆಣಿಸಿದ ಪರನಿಂದನೆಯ ಆತ್ಮರತಿಯ ಸುಳ್ಳು: ಪ್ರಧಾನಿ ಭಾಷಣದ ಬಗ್ಗೆ ನಟ ಕಿಶೋರ್

77ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿ ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿ ಪ್ರಧಾನಿ ಮೋದಿ ಅವರು ಮಾಡಿದ ಭಾಷಣದ ಬಗ್ಗೆ ನಟ ಕಿಶೋರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಭಾಷಣ ದೇಶದ ವಸ್ತುಸ್ಥಿತಿಯನ್ನೂ, ತನ್ನ ಪದವಿಯ ಘನತೆಯನ್ನು ಮರೆತ, ಜನರನ್ನು ಮೂರ್ಖರೆಂದೆಣಿಸಿದ, ಪರನಿಂದನೆಯ, ಆತ್ಮರತಿಯ ಸುಳ್ಳುಗಳ ಅಮಾನ್ಯೀಕರಣಗೊಂಡ ನೋಟುಗಳ ಕಂತೆ ಎಂದು ಟೀಕಿಸಿದ್ದಾರೆ.

ಸ್ವಾತಂತ್ರ್ಯ ದಿನದ ಭಾಷಣದಲ್ಲಿ ದೇಶದ ವಾಸ್ತವಿಕತೆಯ ಬಗ್ಗೆ ಯಾವುದೇ ಅರಿವಿಲ್ಲದೆ, ಒಬ್ಬರ ಹುದ್ದೆಯ ಘನತೆಯಿಲ್ಲದೇ ಇತರರನ್ನು ಅವಮಾನಿಸುವುದು ಮತ್ತು ಸುಳ್ಳಿನಿಂದ ಕೂಡಿತ್ತು ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕಿಶೋರ್ ಪೋಸ್ಟ್ ಮಾಡಿದ್ದಾರೆ.

ಅವರ ಈ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದ್ದು, ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

https://www.facebook.com/1655906036/posts/pfbid0xFs9gYJ5vHdHaequitW3eH4DgXrFU2bDzRi7YPWwyRyPARZkzM214NDnbv6h7Y4fl/?mibextid=Nif5oz

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read