‘ಜಾಣ’ ಖ್ಯಾತಿಯ ನಟಿ ಕಸ್ತೂರಿ ಶಂಕರ್ ಅರೆಸ್ಟ್

ಚೆನ್ನೈ: ತೆಲುಗು ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟಿ ಕಸ್ತೂರಿ ಶಂಕರ್ ಅವರನ್ನು ಹೈದರಾಬಾದ್ ನಲ್ಲಿ ಬಂಧಿಸಲಾಗಿದೆ.

ತಮಿಳುನಾಡಿಗೆ ತೆಲುಗರು 300 ವರ್ಷಗಳ ಹಿಂದೆ ರಾಣಿಯರ ಸೇವೆ ಮಾಡಲು ಬಂದಿದ್ದರು ಎಂದು ಬ್ರಾಹ್ಮಣರ ಸಮ್ಮೇಳನವೊಂದರಲ್ಲಿ ಕಸ್ತೂರಿ ಶಂಕರ್ ಹೇಳಿದ್ದು, ತೆಲುಗರ ಆಕ್ರೋಶಕ್ಕೆ ಕಾರಣವಾಗಿತ್ತು. ವಿವಿಧೆಡೆ ಕಸ್ತೂರಿ ಶಂಕರ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗಿದ್ದು, ಅವರ ವಿರುದ್ಧ ದ್ವೇಷ ಭಾಷಣದ ಪ್ರಕರಣ ದಾಖಲಾಗಿದ್ದವು.

ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕಸ್ತೂರಿ ಶಂಕರ್ ಕ್ಷಮೆಯಾಚಿಸಿ, ನನ್ನ ಮಾತು ಈಗ ಇರುವ ತಮಿಳುನಾಡಿನಲ್ಲಿನ ತೆಕುಗರ ಕುರಿತಾಗಿ ಅಲ್ಲ, ಈ ಹಿಂದಿನ ಇತಿಹಾಸದ ಬಗ್ಗೆ ಮಾತನಾಡಿದ್ದೆ. ಇದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದರು.

ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಎರಡು ದಿನ ನಾಪತ್ತೆಯಾಗಿದ್ದ ಕಸ್ತೂರಿ ಅವರನ್ನು ಚೆನ್ನೈ ಪೋಲೀಸರು ಹೈದರಾಬಾದ್ ನಲ್ಲಿ ಬಂಧಿಸಿದ್ದಾರೆ. ಕನ್ನಡದ ‘ಜಾಣ’, ‘ತುತ್ತಾ ಮುತ್ತಾ’ ಸೇರಿ ಹಲವು ಸಿನಿಮಾಗಳಲ್ಲಿ ಕಸ್ತೂರಿ ನಟಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read