ನಟ ಜಗ್ಗೇಶ್ ಗೆ ಅನಾರೋಗ್ಯ: ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು: ನಟ ನವರಸ ನಾಯಕ ಜಗ್ಗೇಶ್ ಅನಾರೋಗ್ಯದ ಕಾರಣ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೇದಾರನಾಥ ಮತ್ತು ಬದರಿನಾಥ ಯಾತ್ರೆಗೆ ಕೆಲವು ದಿನಗಳ ಹಿಂದೆ ತೆರಳಿದ್ದ ಅವರು ಬೆಟ್ಟ ಹತ್ತಿ ಇಳಿದು ಸತತ ನಡೆದಾಡಿದ ಕಾರಣ ಬೆನ್ನು ನೋವು ಕಾಣಿಸಿಕೊಂಡಿದೆ.

ವೈದ್ಯರ ಸಲಹೆ ಮೇರೆಗೆ ದೆಹಲಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಗೆ ಒಳಗಾಗಿದ್ದಾರೆ. ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲೂ ಅವರಿಗೆ ಭಾಗಿಯಾಗಲು ಸಾಧ್ಯವಾಗಲಿಲ್ಲ. ವೈದ್ಯರು ಎರಡು ವಾರ ಚಿಕಿತ್ಸೆ ಮತ್ತು ಬೆಡ್ ರೆಸ್ಟ್ ಕಡ್ಡಾಯ ಎಂದು ಸಲಹೆ ನೀಡಿದ್ದಾರೆ.

ಕಾವೇರಿ ಹೋರಾಟದಲ್ಲಿ ಇಂದು ಚಿತ್ರರಂಗ ಭಾಗಿಯಾಗಿದ್ದರೂ6 ಜಗ್ಗೇಶ್ ಭಾಗವಹಿಸಿರಲಿಲ್ಲ. ಅಲ್ಲದೆ, ಜಗ್ಗೇಶ್ ಅಭಿನಯದ ‘ತೋತಾಪುರಿ 2’ ಗುರುವಾರ ಬಿಡುಗಡೆಯಾಗಿದ್ದು, ಚಿತ್ರದ ಪ್ರಚಾರ ಕಾರ್ಯದಿಂದಲೂ ಅವರು ದೂರ ಉಳಿದಿದ್ದರು. ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಂಡಿರುವ ಅವರು ಇಂದು ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

https://twitter.com/Jaggesh2/status/1707739710997832164

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read