ಬೆಂಗಳೂರು : ನಗರದ ಕೆಂಗೇರಿ ರಿಂಗ್ ರೋಡ್ ನಲ್ಲಿರುವ ಸಾಹಸ ಸಿಂಹ, ನಟ ಡಾ. ವಿಷ್ಣುವರ್ಧನ್ ಸಮಾಧಿ ನೆಲಸಮಗೊಳಿಸಲಾಗಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆ ಫಿಲ್ಮ್ ಚೇಂಬರ್ ಬಳಿ ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಅದೇ ಜಾಗದಲ್ಲಿ ನಟ ವಿಷ್ಣುವರ್ಧನ್ ಸಮಾಧಿಯನ್ನು ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಹೈಕೋರ್ಟ್ ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿ ತೆರವುಗೊಳಿಸಲಾಗಿದ್ದು, ಸರ್ಕಾರ , ಪೊಲೀಸರ ವಿರುದ್ಧ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ . ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಾದ ಹಿನ್ನೆಲೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿ ತೆರವುಗೊಳಿಸಲಾಗಿದೆ. ಮೈಸೂರಿನಲ್ಲಿ ಒಟ್ಟು 2.75 ಎಕರೆ ಪ್ರದೇಶದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಾಗಿದೆ.ರಿಂಗ್ ರೋಡ್ ನಲ್ಲಿರುವ ಸಾಹಸ ಸಿಂಹ, ನಟ ಡಾ. ವಿಷ್ಣುವರ್ಧನ್ ಅವರ ಮೂಲ ಸಮಾಧಿ ನೆಲಸಮಗೊಳಿಸಲಾಗಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.