ದುನಿಯಾ ಡಿಜಿಟಲ್ ಡೆಸ್ಜ್ : ವರನಟ ಡಾ.ರಾಜ್ ಕುಮಾರ್ ಸಹೋದರಿ ನಾಗಮ್ಮ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಾಗಮ್ಮ ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹುಟ್ಟೂರು ಗಾಜನೂರಿನಲ್ಲಿ ನಾಗಮ್ಮ ವಾಸಿಸುತ್ತಿದ್ದರು. ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದರಿಂದ ಇತ್ತೀಚೆಗೆ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು. ತಮಿಳುನಾಡಿನ ತಾಳವಾಡಿ ತಾಲೂಕಿನ ದೊಡ್ಡ ಗಾಜನೂರಿನಲ್ಲಿ ಅವರು ಮೃತಪಟ್ಟಿದ್ದಾರೆ.
ಮೃತರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ನಾಗಮ್ಮ ಅವರ ಮೃತದೇಹದ ಅಂತ್ರಕ್ರಿಯೆ ನಾಳೆ ಶನಿವಾರ ನಡೆಯಲಿದೆ. ಪುನೀತ್ ಕುಮಾರ್ ಅವರು ನಿಧನ ಹೊಂದಿರುವ ವಿಚಾರ ನಾಗಮ್ಮ ಅವರಿಗೆ ಗೊತ್ತೇ ಇರಲಿಲ್ಲವಂತೆ.