ಮನದನ್ನೆಯೊಂದಿಗೆ ‘ನಿಶ್ಚಿತಾರ್ಥ’ ಮಾಡಿಕೊಂಡ ನಟ ಡಾಲಿ ಧನಂಜಯ್ : ಫೋಟೋ ವೈರಲ್.!

ಖ್ಯಾತ ನಟ ಡಾಲಿ ಧನಂಜಯ್ ಗೆ ಕಂಕಣ ಭಾಗ್ಯ ಕೂಡಿ ಬಂದಿರುವ ವಿಚಾರ ನಿಮಗೆ ಗೊತ್ತಿದೆ. ಇದೀಗ ಅವರು ಮನದನ್ನೆಯೊಂದಿಗೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಧನಂಜಯ್ ಹುಟ್ಟೂರಾದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಆಪ್ತರ ಸಮ್ಮುಖದಲ್ಲಿ ಬಹಳ ಸಿಂಪಲ್ ಆಗಿ ರಿಂಗ್ ಬದಲಾಯಿಸಿಕೊಂಡು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಫೆ.16 ಕ್ಕೆ ಧನಂಜಯ –ಧನ್ಯತಾ ಮದುವೆ ನೆರವೇರಲಿದೆ.

ಚಿತ್ರದುರ್ಗ ಮೂಲದ ವೈದ್ಯೆಯೊಂದಿಗೆ ಫೆಬ್ರವರಿ 16ರಂದು ಮೈಸೂರಿನಲ್ಲಿ ಡಾಲಿ ಧನಂಜಯ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞರಾಗಿರುವ ಡಾ. ಧನ್ಯತಾ ವೈದ್ಯಕೀಯ ಪದವಿಯಲ್ಲಿ ರ್ಯಾಂಕ್ ಪಡೆದಿದ್ದಾರೆ. ಇಂಜಿನಿಯರಿಂಗ್ ಪದವಿಯಲ್ಲಿ ರ್ಯಾಂಕ್ ಪಡೆದ ಡಾಲಿ ಧನಂಝಯ್ ಕೂಡ ಪ್ರತಿಭಾವಂತರಾಗಿದ್ದಾರೆ.

ಕಳೆದು ಒಂದು ವರ್ಷದಿಂದ ಪರಸ್ಪರ ಪ್ರೀತಿಯಲ್ಲಿದ್ದ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಡಾಲಿ ಧನಂಜಯ್ ತಮ್ಮ ಮನದನ್ನೆಯನ್ನು ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದರು.ಚಿತ್ರದುರ್ಗ ಮೂಲದ ಧನ್ಯತಾ ಅರಸೀಕೆರೆಯಲ್ಲಿ ಬೆಳೆದಿದ್ದಾರೆ. ಧನಂಜಯ ಅವರಿಗೆ ಹಳೆಯ ಪರಿಚಯವಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಸಂಪರ್ಕಕ್ಕೆ ಬಂದು ಕಳೆದು ಒಂದು ವರ್ಷದಿಂದ ಪ್ರೀತಿಸಿದ್ದಾರೆ. ಇವರ ಪ್ರೀತಿಗೆ ಎರಡೂ ಮನೆಯವರು ಖುಷಿಯಿಂದ ಒಪ್ಪಿದ್ದು, ಫೆಬ್ರವರಿ 16 ರಂದು ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read