ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ದರ್ಪ ಇನ್ನೂ ಕಡಿಮೆ ಆದಂತೆ ಕಾಣುತ್ತಿಲ್ಲ.
ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ.ಇದರ ಪರಿಣಾಮ ಅವರು ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.
ನಟ ದರ್ಶನ್ ಇರುವ ಸೆಲ್ ಬಳಿ ಸಿಸಿಟಿವಿ ಸೇರಿ ಹಲವು ಬಿಗಿ ಭದ್ರತೆ ವಹಿಸಲಾಗಿದೆ. ಒಳಗಿನ ಶೌಚಾಲಯವನ್ನ ಕೂಡ ದರ್ಶನ್ ಅವರೇ ಕ್ಲೀನ್ ಮಾಡಬೇಕು. ಎಲ್ಲಾ ನಿಯಮಗಳಿಂದ ದರ್ಶನ್ ತತ್ತರಿಸಿ ಹೋಗಿದ್ದಾರೆ.
ಹತಾಶೆಗೆ ಸಹ ಕೈದಿಗಳಿಗೆ ಮಾನಸಿಕ ಕಿರುಕುಳ.?
ನಟ ದರ್ಶನ್ ಸಹ ಕೈದಿಗಳಿಗೆ ಕಿರುಕುಳ ನೀಡಿತ್ತಿರುವ ಆರೋಪ ಕೇಳಿಬಂದಿದೆ. ದರ್ಶನ್ ಇರುವ ಸೆಲ್ ನಲ್ಲಿ ಅನುಕುಮಾರ್, ನಾಗರಾಜು. ಜಗ್ಗ, ಪ್ರದೋಷ್, ಲಕ್ಷ್ಮಣ್ ಇದ್ದಾರೆ. ನಾಗರಾಜ್ ಒಬ್ಬರನ್ನ ಬಿಟ್ಟು ಉಳಿದ ಆರೋಪಿಗಳಿಗೆ ದರ್ಶನ್ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಜೈಲಿನಲ್ಲಿ ನಟ ದರ್ಶನ್ ಹಾಗೂ ಜಗ್ಗನ ನಡುವೆ ದೊಡ್ಡ ಜಗಳ ನಡೆದಿದೆ. ಇಬ್ಬರ ಜಗಳ ಜೋರಾಗುತ್ತಿದ್ದಂತೆ ಜೈಲಾಧಿಕಾರಿಗಳು ಬಂದು ಜಗಳ ಬಿಡಿಸಿದ್ದಾರೆ. ಹಾಗೂ ಮಲಗಿದ್ದ ಸಹ ಕೈದಿಗಳನ್ನ ದರ್ಶನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಲ್ಲಿ ಒದ್ದು ಎಬ್ಬಿಸುತ್ತಾರೆ ಎನ್ನಲಾಗಿದೆ. ದರ್ಶನ್ ಕಿರುಕುಳ ತಾಳಲಾಗುತ್ತಿಲ್ಲ, ದಯವಿಟ್ಟು ನಮ್ಮನ್ನ ಬೇರೆ ಸೆಲ್ ಗೆ ಶಿಫ್ಟ್ ಮಾಡಿ ಎಂದು ಸಹ ಕೈದಿಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಒಂದು ಕಡೆ ಕೊಲೆ ಪ್ರಕರಣದಲ್ಲಿ ಯಾರಿಗೂ ಜಾಮೀನು ಸಿಗುತ್ತಿಲ್ಲ, ಇನ್ನೊಂದು ಕಡೆ ದರ್ಶನ್ ಹಿಂಸೆ. ಯಾರಿಗೂ ಇಂತಹ ಶಿಕ್ಷೆ ಬೇಡ ಎಂದು ಪ್ರಕರಣದ ಆರೋಪಿಗಳು ಕಣ್ಣೀರಿಡುತ್ತಿದ್ದಾರೆ.
