ಬೆಂಗಳೂರು : ನಟ ದರ್ಶನ್ ಸುಮ್ಮನೇ ಇದ್ದು ತಪ್ಪು ಮಾಡುತ್ತಿದ್ದಾರೆ, ದರ್ಶನ್ ಅವರ ಫ್ಯಾನ್ಸ್ ಗೆ ಹೇಳಬೇಕು ಎಂದು ನಟಿ ರಮ್ಯಾ ಹೇಳಿದ್ದಾರೆ.
ಇಂದು ಬೆಂಗಳೂರು ಕಮಿಷನರ್ ಗೆ ದೂರು ನೀಡಿದ ಬಳಿಕ ನಟಿ ರಮ್ಯಾ ಸುದ್ದಿಗಾರರ ಜೊತೆ ಮಾತನಾಡಿದ್ದಾರೆ.
ನಟ ದರ್ಶನ್ ಸುಮ್ಮನೇ ಇದ್ದು ತಪ್ಪು ಮಾಡುತ್ತಿದ್ದಾರೆ, ದರ್ಶನ್ ಅವರ ಫ್ಯಾನ್ಸ್ ಗೆ ಹೇಳಬೇಕು. ಅಂದು ದರ್ಶನ್ ಅಭಿಮಾನಿಗಳಿಗೆ ಮನವಿ ಮಾಡಿದ್ದರೆ ರೇಣುಕಾಸ್ವಾಮಿ ಕೊಲೆ ಆಗುತ್ತಿರಲಿಲ್ಲವೇನೋ..? ದರ್ಶನ್ ತಮ್ಮ ಫ್ಯಾನ್ಸ್ ಗೆ ಬುದ್ದಿವಾದ ಹೇಳಬೇಕು ಎಂದರು.
ನಾನು ಕಮಿಷನರ್ ಗೆ ದೂರು ನೀಡಿದ್ದೇನೆ. ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಎಂದು ನಟಿ ರಮ್ಯಾ ಹೇಳಿದರು.ಸುಪ್ರೀಂಕೋರ್ಟ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಕ್ಕೆ ನನ್ನ ಪೋಸ್ಟ್ ಗೆ ಕೀಳಾಗಿ ಮೆಸೇಜ್ ಮಾಡಿದ್ದರು. ಇದರಿಂದ ನನಗೆ ಬಹಳ ಬೇಜರಾಯಿತು . ಹುಡುಗರಂತೆ ಹೆಣ್ಮಕ್ಕಳಿಗೂ ಸ್ವಾತಂತ್ರ್ಯವಿದೆ . ನಾನು ಎಲ್ಲಾ ಹೆಣ್ಣು ಮಕ್ಕಳ ಪರವಾಗಿ ದೂರು ನೀಡಿದ್ದೇನೆ. ಚಿತ್ರರಂಗದ ಹಲವರು ನನಗೆ ನನಗೆ ಸಪೋರ್ಟ್ ಮಾಡಿದ್ದಾರೆ, ಮೆಸೇಜ್ ಮಾಡಿ, ಕಾಲ್ ಮಾಡಿ ಬೆಂಬಲ ನೀಡಿದ್ದಾರೆ ಎಂದರು.ಹೊರಗೆ ಹೇಳಲು ಸಂಕೋಚ , ಅದಕ್ಕೆ ನನಗೆ ಮೆಸೇಜ್ ಮಾಡಿದ್ದಾರೆ. ರಕ್ಷಿತಾ, ವಿಜಯಲಕ್ಷ್ಮಿ ನನ್ನ ಬಗ್ಗೆ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಯಾವ ಒತ್ತಡಲಿದ್ದಾರೋ ಗೊತ್ತಿಲ್ಲ ಎಂದರು.