ಬೆಂಗಳೂರು : ಹಿರಿಯ ನಟ ದ್ವಾರಕೀಶ್ (81) ನಿಧನಕ್ಕೆ ನಟ ದರ್ಶನ್ ಸೇರಿ ಹಲವು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಟ ದರ್ಶನ್ ಕೂಡ ಟ್ವೀಟ್ ಮಾಡುವ ಮೂಲಕ ಅಗಲಿದ ನಾಯಕನಿಗೆ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ ‘ಪ್ರಚಂಡ ಕುಳ್ಳ’ನಾಗಿ 5 ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.
ನಟ ಶಿವರಾಜ್ ಕುಮಾರ್ ಸಂತಾಪ
ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮ ನಗುಮುಖವನ್ನೇ ಸದಾ ನೆನೆಯುತ್ತ ಬೀಳ್ಕೊಡುವೆ. ಹೋಗಿ ಬನ್ನಿ ದ್ವಾರಕೀಶ್ ಮಾಮ ಎಂದು ನಟ ಶಿವರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ದ್ವಾರಕೀಶ್ ನಿಧನಕ್ಕೆ ನಟ ದೊಡ್ಡಣ್ಣ, ನಟಿ ಪ್ರಿಯಾಮಣಿ, ಮಾಜಿ ಸಂಸದ ಶಶಿಕುಮಾರ್, ನಟ ಜಗ್ಗೇಶ್ ಸೇರಿದಂತೆ ಹಲವು ಸಿನಿ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮ ನಗುಮುಖವನ್ನೇ ಸದಾ ನೆನೆಯುತ್ತ ಬೀಳ್ಕೊಡುವೆ. ಹೋಗಿ ಬನ್ನಿ ದ್ವಾರಕೀಶ್ ಮಾಮ.
Om Shanthi pic.twitter.com/Brets0GX68
— DrShivaRajkumar (@NimmaShivanna) April 16, 2024
ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ pic.twitter.com/Wpcrv97Cgw
— Darshan Thoogudeepa (@dasadarshan) April 16, 2024