ಸಿಎಂ ‘ಸೋಮಾರಿ’ ಸಿದ್ದು ಈ ಪುಸ್ತಕ ಉಡುಗೊರೆ ನೀಡಿದ್ದು ಎಷ್ಟು ಸರಿ ಎಂದ ನಟ ಚೇತನ್

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ಗಳಿಗೆ ಬಾಬಾಸಾಹೇಬ್ ಅವರ ‘ಅನೀಹಿಲೇಷನ್ ಆಫ್ ಕಾಸ್ಟ್ “ಕೃತಿಯ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಗೊರೆಯಾಗಿ ಕೊಟ್ಟಿರುವುದಕ್ಕೆ ನಟ ಚೇತನ್, ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಟೀಕಿಸಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ಗಳಿಗೆ ಬಾಬಾಸಾಹೇಬ್ ಅವರ ‘ಅನೀಹಿಲೇಷನ್ ಆಫ್ ಕಾಸ್ಟ್ “ಕೃತಿಯ ಪ್ರತಿಯನ್ನು ಸಿಎಂ ‘ಸೋಮಾರಿ’ ಸಿದ್ದು ನೀಡಿದ್ದಾರೆ. ಎಷ್ಟು ವಿಪರ್ಯಾಸ ಎಂದು ವ್ಯಂಗ್ಯವಾಡಿದ್ದಾರೆ.

ಅಂಬೇಡ್ಕರ್ ಅವರ ಕಾಲದಲ್ಲಿ ಅವರ ಅತಿದೊಡ್ಡ ರಾಜಕೀಯ ಶತ್ರು ಕಾಂಗ್ರೆಸ್ ಪಕ್ಷ (ರಾಜಕೀಯ ಹಿಂದೂ ಧರ್ಮ); ಇಂದಿನ ಕಾಂಗ್ರೆಸ್ ಪಕ್ಷ (ಅದೇ ಮನುವಾದ) ಅಂಬೇಡ್ಕರ್ ಅವರನ್ನು ಚುನಾವಣಾ ಲಾಭಕ್ಕಾಗಿ ಅಪಹರಿಸಲು ಪ್ರಯತ್ನಿಸುತ್ತಾರೆ

ಗಾಂಧಿಯವರ 36 ಬ್ರಾಹ್ಮಣ್ಯದ ಪುಸ್ತಕಗಳಲ್ಲಿ ಒಂದನ್ನು ಸಿಎಂ ಈ ಇಬ್ಬರು ವಿದ್ಯಾರ್ಥಿಗಳಿಗೆ ನೀಡಬೇಕಿತ್ತು; ಇದು ಸೈದ್ಧಾಂತಿಕವಾಗಿ ಹೆಚ್ಚು ಪ್ರಾಮಾಣಿಕವಾದ ಉಡುಗೊರೆಯಾಗಿರುತ್ತಿತ್ತು ಎಂದು ಚೇತನ್ ಹೇಳಿದ್ದಾರೆ.

Image

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read