ಇಂದು ‘ಭುವನಂ ಗಗನಂ’ ಚಿತ್ರದ ಟೀಸರ್ ಲಾಂಚ್ ಮಾಡಲಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Bhuvanam Gaganam

ಗಿರೀಶ್ ಮೂಲಿಮನಿ ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ‘ಭುವನಂ ಗಗನಂ’ ಚಿತ್ರ ತನ್ನ ಟೈಟಲ್‌ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದೀಗ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ಟೀಸರ್ ಲಾಂಚ್ ಮಾಡಲಿದ್ದು, ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ 5 :57 ಕ್ಕೆ ಟೀಸರ್ ವೀಕ್ಷಿಸಬಹುದಾಗಿದೆ.

ಈ ಚಿತ್ರವನ್ನು ಎಸ್ ವಿ ಸಿ ಫಿಲಂಸ್ ಬ್ಯಾನರ್ ನಡಿ ಎಂ ಮುನೇಗೌಡ ನಿರ್ಮಾಣ ಮಾಡಿದ್ದು, ಪ್ರಮೋದ್ ಮತ್ತು ಪೃಥ್ವಿ ಅಂಬಾರ್ ಸೇರಿದಂತೆ ಅಶ್ವಥಿ, ರಚಿಲ್ ಡೇವಿಡ್, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗಾ, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ತೆರೆ ಹಂಚಿಕೊಂಡಿದ್ದಾರೆ.

ಸುನೀಲ್ ಕಶ್ಯಪ್ ಸಂಕಲನವಿದ್ದು, ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ ನೀಡಿದ್ದಾರೆ.

https://twitter.com/aanandaaudio/status/1768650373974356170

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read