ಎ.ಪಿ. ಅರ್ಜುನ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಅಂದುಕೊಂಡಂತೆ ಭರ್ಜರಿ ಯಶಸ್ಸು ಕಾಣದೆ ಇದ್ದರೂ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಈ ಚಿತ್ರ ಇದೀಗ ಡಿಸೆಂಬರ್ 29ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಜೀ ಕನ್ನಡ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಚಿತ್ರವನ್ನು ವಾಸವಿ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ಉದಯ್ ಕೆ ಮೆಹ್ತಾ, ಸೂರಜ್ ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದು, ಮಣಿ ಶರ್ಮಾ ಸಂಗೀತ ಸಂಯೋಜನೆ ನೀಡಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೇರಿದಂತೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಜಾರ್ಜಿಯಾ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ನಿಕಿತಿನ್ ಧೀರ್, ನವಾಬ್ ಷಾ, ರೋಹಿತ್ ಪಾಠಕ್, ನಾಥನ್ ಜೋನ್ಸ್, ರೂಬಿಲ್ ಮೊಸ್ಕ್ವೆರಾ ಬಣ್ಣ ಹಚ್ಚಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ಸತ್ಯ ಹೆಗ್ಡೆ ಛಾಯಾಗ್ರಹಣವಿದೆ.