ʼಜವಾನ್‌ʼ ಚಿತ್ರದಲ್ಲಿ ಶಾರುಖ್‌ ಜೊತೆ ನಟನೆ; ಖಾಸಗಿ ಜೆಟ್‌ ನಲ್ಲೇ ಫೇಮಸ್‌ ನಟಿಯ ಓಡಾಟ…! ಬೆರಗಾಗಿಸುತ್ತೆ ಒಟ್ಟಾರೆ ʼಆಸ್ತಿʼ

ದಕ್ಷಿಣ ಚಿತ್ರರಂಗದ ಖ್ಯಾತ ನಟಿಯರಲ್ಲೊಬ್ಬರು ನಯನತಾರಾ. ಸೌತ್‌ ಇಂಡಸ್ಟ್ರಿಯಲ್ಲಿ ನಯನತಾರಾ ಲೇಡಿ ಸೂಪರ್‌ಸ್ಟಾರ್ ಎಂದೇ ಫೇಮಸ್‌. ನಯನತಾರಾ ಶೀಘ್ರದಲ್ಲೇ ‘ಜವಾನ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಲಿದ್ದಾರೆ. ಜನಪ್ರಿಯತೆಗೆ ತಕ್ಕಂತೆ ನಯನತಾರಾ ಅಪಾರ ಸಂಪತ್ತನ್ನು ಕೂಡ ಹೊಂದಿದ್ದಾರೆ. ನಯನತಾರಾ ದಕ್ಷಿಣ ಚಿತ್ರರಂಗದ ಅತ್ಯಂತ ಸುಂದರ ಮತ್ತು ಪ್ರತಿಭಾವಂತ ನಟಿ. ತಮ್ಮ ಸಹಜ ನಟನೆಯಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ.

ನಯನತಾರಾ ಅವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ನಯನತಾರಾ ಎಂದು ಹೆಸರು ಬದಲಾಯಿಸಿಕೊಂಡ್ರು. 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಸೌತ್ ಇಂಡಸ್ಟ್ರಿಗೆ ಅನೇಕ ಸೂಪರ್‌ ಹಿಟ್‌ ಚಿತ್ರಗಳನ್ನು ಈಕೆ ನೀಡಿದ್ದಾರೆ. ಅದೇ ರೀತಿ ಕೋಟಿಗಟ್ಟಲೆ ಆಸ್ತಿಯನ್ನೂ ಸಂಪಾದಿಸಿದ್ದಾರೆ. ಆದ್ದರಿಂದಲೇ ಅವರನ್ನು ಲೇಡಿ ಸೂಪರ್‌ಸ್ಟಾರ್ ಎಂದು ಕರೆಯುತ್ತಾರೆ. ನಯನತಾರಾ ಚಿತ್ರವೊಂದಕ್ಕೆ 5 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಈಕೆ ಐಷಾರಾಮಿ ಜೀವನದ ಒಡತಿಯಾಗಲು ಇದೇ ಕಾರಣ. ನಯನತಾರಾ ಬಳಿ ಅನೇಕ ದುಬಾರಿ ವಾಹನಗಳಿವೆ. ತನ್ನದೇ ಆದ ಖಾಸಗಿ ಜೆಟ್ ಅನ್ನು ಸಹ ಈಕೆ ಹೊಂದಿದ್ದಾರೆ. ನಟನೆಯ ಹೊರತಾಗಿ ನಯನತಾರಾ ಉದ್ಯಮಿಯೂ ಹೌದು. 2021 ರಲ್ಲಿ ‘ದಿ ಲಿಪ್ ಬಾಮ್’ ಎಂಬ ಹೆಸರಿನ ತನ್ನ ತ್ವಚೆಯ ಬ್ರಾಂಡ್ ಅನ್ನು ಪ್ರಾರಂಭಿಸಿದ್ದಾರೆ. ನಯನತಾರಾ ಅವರ ಒಟ್ಟಾರೆ ಆಸ್ತಿಯ ಮೌಲ್ಯ ಸರಿಸುಮಾರು 25 ಮಿಲಿಯನ್ ಅಮೆರಿಕನ್‌ ಡಾಲರ್, ಅಂದರೆ 200 ಕೋಟಿಗೂ ಅಧಿಕ ಆಸ್ತಿಯನ್ನು ನಯನತಾರಾ ಸಂಪಾದಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read