ಕಾರವಾರ: ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ವೆಂಕಟಾಪುರ ಕುಕನೀರ್ ಬಳಿ ಗರ್ಭ ಧರಿಸಿದ್ದ ಹಸು ಕೊಂದು ಮಾಂಸ ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ರಾಹಿಂ ಮಹಮದ್(45) ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕುಕನೀರ್ ನದಿ ದಂಡೆಯ ಮೇಲೆ ಹಸು ಕಡಿದು ಗೋವಿನ ಹೊಟ್ಟೆಯೊಳಗೆ ಇದ್ದ ಕರುವನ್ನು ಚೀಲದಲ್ಲಿ ಸುತ್ತಿ ಬಿಸಾಡಲಾಗಿತ್ತು. ಬೀದಿ ನಾಯಿಯೊಂದು ಚೀಲವನ್ನು ಹರಿಯುವ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದು, ಶನಿವಾರ ಸಂಜೆ ಭಟ್ಕಳದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರ ತನಿಖೆ ಮುಂದುವರೆದಿದೆ.