ಹಾಸನ: ಹಾಸನ ಜಿಲ್ಲೆ ಸಕಲೇಶಪುರ ಪುರಸಭೆ ಮುಖ್ಯಾಧಿಕಾರಿ ಕೊಠಡಿಯ ಟೇಬಲ್ ಮೇಲಿದ್ದ ಕಡತಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆ ನಿವಾಸಿ ನಿಂಗರಾಜು ಬಂಧಿತ ಆರೋಪಿ. ಹೇಮಾವತಿ ಸೇತುವೆಯ ಬಳಿ ತರಕಾರಿ ಮಾರಾಟಕ್ಕೆ ಮುಖ್ಯಾಧಿಕಾರಿ ಅಡ್ಡಿ ಮಾಡುತ್ತಿದ್ದರು. ಅದೇ ಸಿಟ್ಟಿನಿಂದ ಬೆಂಕಿ ಹಚ್ಚಿರುವುದಾಗಿ ಆರೋಪಿ ಹೇಳಿದ್ದಾನೆ ಎನ್ನಲಾಗಿದೆ. ಸಕಲೇಶಪುರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
