BIG NEWS : ಕನ್ನಡ ಭಾಷೆ ನಿರ್ಲಕ್ಷಿಸಿ ಉರ್ದು ಭಾಷೆಗೆ ಹೆಚ್ಚಿನ ಅನುದಾನ ಆರೋಪ : CM ಸಿದ್ದರಾಮಯ್ಯ ಸ್ಪಷ್ಟನೆ |WATCH VIDEO

ಬೆಂಗಳೂರು : ಕನ್ನಡ ಭಾಷೆ ನಿರ್ಲಕ್ಷಿಸಿ ಉರ್ದು ಭಾಷೆಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎನ್ನಲಾದ ಆರೋಪ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ”ಉರ್ದು ಭಾಷೆಗೆ ₹100 ಕೋಟಿ, ಕನ್ನಡ ಭಾಷೆಗೆ ₹32 ಕೋಟಿ, ಇದು ಸತ್ಯವೇ? https://youtu.be/iWLl1T0V1SM ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಉರ್ದು ಭಾಷೆಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸತ್ಯಕ್ಕೆ ದೂರವಾದದ್ದು. ಇದು ಸಮಾಜದ ಸೌಹಾರ್ದತೆಗೆ ಧಕ್ಕೆ ಉಂಟುಮಾಡಬೇಕೆಂಬ ದುರುದ್ದೇಶದಿಂದ ಸೃಷ್ಟಿಸಿದ ಫೇಕ್ ಸುದ್ದಿಯಾಗಿದೆ. ಹೀಗಾಗಿ ನಾಡಿನ ಜನತೆ ಇಂತಹ ಅಪಪ್ರಚಾರಗಳಿಗೆ ಕಿವಿಗೊಡದೆ ಸತ್ಯದ ಜೊತೆ ನಿಲ್ಲಬೇಕೆಂದು ಮನವಿ ಮಾಡುತ್ತೇನೆ. ಕನ್ನಡ ಸೇರಿದಂತೆ ಇತರೆ ಎಲ್ಲಾ ಭಾಷೆಗಳಿಗೆ ನಮ್ಮ ಸರ್ಕಾರ ನೀಡಿರುವ ಅನುದಾನದ ಕಂಪ್ಲೀಟ್ ಡೀಟೈಲ್ಸ್ ಈ ವಿಡಿಯೋದಲ್ಲಿದೆ. ಕೊನೆವರೆಗೂ ನೋಡಿ”..ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read