ಶಿವಮೊಗ್ಗ: ಅಡಿಕೆ ಕೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಳಲೂರು ಗ್ರಾಮದಲ್ಲಿ ನಡೆದಿದೆ.
ಹರಮಘಟ್ಟದ ವೆಂಕಟೇಶ್(30) ಮೃತಪಟ್ಟವರು. ಹೊಳಲೂರಿನಲ್ಲಿ ಓಂಕಾರಪ್ಪ ಎಂಬುವರ ತೋಟದಲ್ಲಿ ಅಡಿಕೆ ಮರಗಳಿಂದ ಅಡಿಕೆ ಕೊಯ್ಯುವಾಗ ಮೇಲಿನಿಂದ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಕುಡುಗೋಲು ಸ್ಪರ್ಶಿಸಿದೆ. ಇದರಿಂದಾಗಿ ವಿದ್ಯುತ್ ಪ್ರವಹಿಸಿ ವೆಂಕಟೇಶ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತ ವೆಂಕಟೇಶ್ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.