Video | ರಸ್ತೆ ದಾಟುತ್ತಿದ್ದ ಯುವತಿಗೆ ಬಸ್ ಡಿಕ್ಕಿ; ಚಾಲಕನ ನಿರ್ಲಕ್ಷ್ಯಕ್ಕೆ ಹಾರಿಹೋಯ್ತು ಪ್ರಾಣ

ರಸ್ತೆಯಲ್ಲಿ ತೆರಳುವಾಗ ಜಾಗ್ರತೆ ವಹಿಸದಿದ್ರೆ ಅಪಾಯ ಸಂಭವಿಸುತ್ತದೆ. ಕೆಲವೊಮ್ಮೆ ನಾವು ಜಾಗ್ರತೆ ವಹಿಸಿದ್ರೂ ವಾಹನ ಸವಾರರ ಅಜಾಗರೂಕತೆಯಿಂದ ಅನಾಹುತಗಳು ನಡೆದುಹೋಗುತ್ತದೆ. ಅಂಥದ್ದೇ ಸನ್ನಿವೇಶ ಹೈದರಾಬಾದ್‌ನ ಕೊತಗುಡ ಜಂಕ್ಷನ್‌ನಲ್ಲಿ ಜರುಗಿದೆ.

25 ವರ್ಷದ ಕೆ ಮಾಧವಿ ಎಂಬ ಯುವತಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿರೋ ದುರಂತ ಘಟನೆ ನಡೆದಿದೆ. ಬರ್ಕತ್‌ಪುರದ ಬ್ಯೂಟಿಷಿಯನ್, ಮಾಧವಿ ರಸ್ತೆ ದಾಟುತ್ತಿದ್ದಾಗ ಶುಕ್ರವಾರ ರಾತ್ರಿ 8:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

ಅಷ್ಟೇನೂ ಹೆಚ್ಚು ವಾಹನ ದಟ್ಟಣೆಯಿರದ ಜಾಗದಲ್ಲಿ, ಆಕೆಯನ್ನು ಸ್ಪಷ್ಟವಾಗಿ ಚಾಲಕ ನೋಡುತ್ತಿದ್ದರೂ, ಜಂಕ್ಷನ್‌ನಲ್ಲಿ ಸ್ವಲ್ಪ ತಿರುವು ತೆಗೆದುಕೊಳ್ಳುವಾಗ ಬಸ್ ಡ್ರೈವರ್ ಹಿಂದಿನಿಂದ ಆಕೆಗೆ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗಳಾಗಿವೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಸಾವನ್ನಪ್ಪಿದ್ದಾರೆ.

ಮಾಧವಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ನಿರ್ಲಕ್ಷತನದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಪೊಲೀಸರು ಬಸ್ ಚಾಲಕ ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಮನಕಲಕುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/CoreenaSuares2/status/1835019724075446534?ref_src=twsrc%5Etfw%7Ctwcamp%5Etweetembed%7Ctwterm%5E1835019724075446534%7

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read