ಅಭಿಷೇಕ್ ಅಂಬರೀಶ್- ಅವಿವಾ ಮಗನ ಹೆಸರೇನು ಗೊತ್ತೆ? ಅದ್ಧೂರಿಯಾಗಿ ನಡೆದ ನಾಮಕರಣ ಶಾಸ್ತ್ರ

ಬೆಂಗಳೂರು: ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಪುತ್ರ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣ ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಲನಚಿತ್ರ ರಂಗದ ಹಾಗೂ ರಾಜಕೀಯ ರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮಗನ ಹೆಸರಿನ ಬಗ್ಗೆಯೇ ಎಲ್ಲರಿಗೂ ಕುತೂಹಲವಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದ್ದು, ಅಂಬರೀಶ್ ಅವರ ಮೂಲ ಹೆಸರನ್ನೂ ಸೇರಿಸಿ ಹೆಸರಿಡಲಾಗಿದೆ.

ಅಭಿಶೇಕ್ ಹಾಗೂ ಅವಿವಾ ಮಗನಿಗೆ ರಾಣಾ ಅಮರ್ ಎಂದು ನಾಮಕರಣ ಮಾಡಲಾಗಿದೆ. ನಾಮಕರಣ ಮಹೋತ್ಸವದಲ್ಲಿ ಹಲವಾರು ಗಣ್ಯರು ಭಾಗವಹಿಸಿ ರಾಣಾ ಅಮರ್ ಗೆ ಹಾರೈಸಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read