‘ರಾಜಯೋಗ’ ಚಿತ್ರದ ಮೊದಲ ಹಾಡನ್ನು ಲಾಂಚ್ ಮಾಡಲಿದ್ದಾರೆ ಅಭಿಷೇಕ್ ಅಂಬರೀಶ್

ಲಿಂಗರಾಜು ನಿರ್ದೇಶನದ ‘ರಾಜಯೋಗ’ ಚಿತ್ರದ ಮೊದಲ ಹಾಡು ಇಂದು ಸಂಜೆ 6 ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದ್ದು, ಅಭಿಷೇಕ್ ಅಂಬರೀಶ್ ಕೈಯಲ್ಲಿ ಈ ಹಾಡನ್ನು ಲಾಂಚ್ ಮಾಡಿಸಲಿದ್ದಾರೆ.

ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ. ಈ ಹಾಡಿಗೆ ಖ್ಯಾತ ಗಾಯಕಿ ಅನನ್ಯ ಭಟ್ ಮತ್ತು ಅನುಪ್ ಧ್ವನಿಯಾಗಿದ್ದು, ಅಕ್ಷಯ್ ರಿಷಬ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನುಳಿದಂತೆ ಲಿಂಗರಾಜ ಸಾಹಿತ್ಯ ಬರೆದಿದ್ದಾರೆ.

ಧರ್ಮಣ್ಣ ಕಡೂರು ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರವನ್ನು ರಾಮರತ್ನ ಪ್ರೊಡಕ್ಷನ್ ಬ್ಯಾನರ್ ನಡಿ ಕುಮಾರ ಕಂಠೀರವ ಬಂಡವಾಳ ಹೂಡಿದ್ದು, ವಿಷ್ಣು ಪ್ರಸಾದ್ ಛಾಯಾಗ್ರಹಣ ಕೆಂಪರಾಜು ಅವರ ಸಂಕಲನವಿದೆ. ಶೀಘ್ರದಲ್ಲೇ ಈ ಸಿನಿಮಾ ರಾಜ್ಯದ್ಯಂತ ತೆರೆ ಕಾಣಲಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read